alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಕ್ಕೆ ಅವಮಾನ ಮಾಡಿದ ಮ್ಯಾನೇಜರ್ ಅರೆಸ್ಟ್

arest

ಬೆಂಗಳೂರು: ಕನ್ನಡ ಭಾಷೆಗೆ ಅವಮಾನ ಮಾಡಿದ್ದ ಖಾಸಗಿ ಆಸ್ಪತ್ರೆಯೊಂದರ ಹೆಚ್.ಆರ್. ಮ್ಯಾನೇಜರ್ ನನ್ನು ಸಂಜಯ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮೂಲದ ಸಾತ್ವಿಕ್ ಸಚ್ಚಾರ್ ಬಂಧಿತ ಆರೋಪಿ. ಜೂನ್ 18 ರಂದು ಸಾತ್ವಿಕ್ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.

ಆನ್ ಲೈನ್ ನಲ್ಲಿ ಅವರು ಫುಡ್ ಆರ್ಡರ್ ಮಾಡಿದ್ದು, ಖಾಸಗಿ ಕಂಪನಿಯ ಡೆಲಿವರಿ ಬಾಯ್ ಬಿ.ಎಂ. ಅನಿಲ್ ಅದನ್ನು ತಂದು ಕೊಟ್ಟಿದ್ದಾರೆ.

ಅನಿಲ್ ಬರುವುದು 5 ನಿಮಿಷ ತಡವಾಗಿದ್ದರಿಂದ ಸಾತ್ವಿಕ್ ಗರಂ ಆಗಿದ್ದು, ಈ ವೇಳೆ ಅನಿಲ್ ಕನ್ನಡದಲ್ಲಿ ತಡವಾಗಿದೆ ಕ್ಷಮಿಸಿ ಎಂದು ವಿನಂತಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಸಾತ್ವಿಕ್, ಕನ್ನಡ ಭಾಷೆ ಹಾಗೂ ಅನಿಲ್ ರನ್ನು ನಿಂದಿಸಿದ್ದಾರೆ. ಅನಿಲ್ ಸಂಜಯ್ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾತ್ವಿಕ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...