alex Certify
ಕನ್ನಡ ದುನಿಯಾ       Mobile App
       

Kannada Duniya

ರಾಘವೇಂದ್ರ ಮಠದಲ್ಲಿ ನಗ, ನಗದು ಲೂಟಿ

ಕಲಬುರಗಿ: ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡದ ಶ್ರೀರಾಘವೇಂದ್ರ ಸ್ವಾಮಿಗಳ ಉತ್ತರಾದಿ ಮಠದಲ್ಲಿ ಸುಮಾರು 18 ಲಕ್ಷ ರೂ ಮೌಲ್ಯದ ನಗ, ನಗದು ದೋಚಲಾಗಿದೆ.

ಮಠದ ಹಿಂಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಬೆಳ್ಳಿ ಸಾಮಗ್ರಿಗಳು, 5 ಲಕ್ಷ ರೂ. ನಗದು ಸೇರಿ ಹಲವು ವಸ್ತುಗಳನ್ನು ದೋಚಿದ್ದಾರೆ.

ಕಾಣಿಕೆ ಹುಂಡಿ ಹಾಗೂ ಟ್ರಂಕ್ ಗಳನ್ನು ಸಮೀಪದ ನದಿಯಲ್ಲಿ ಬಿಸಾಡಿ ಕಳ್ಳರು ಪರಾರಿಯಾಗಿದ್ದಾರೆ. 3 ವರ್ಷಗಳ ಹಿಂದೆ ಇದೇ ಮಠದಲ್ಲಿ ಕಳ್ಳತನ ನಡೆಸಲಾಗಿತ್ತು. ಮತ್ತೆ ಕಳ್ಳತನವಾಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

ಸ್ಥಳಕ್ಕೆ ಮಳಖೇಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...