alex Certify
ಕನ್ನಡ ದುನಿಯಾ       Mobile App
       

Kannada Duniya

ಕಲಬುರಗಿಯಲ್ಲಿ ಬೆಳ್ಳಂಬೆಳಿಗ್ಗೆ ಮೊಳಗಿದ ಗುಂಡಿನ ಸದ್ದು

ಕಲಬುರಗಿ: ಕಲಬುರಗಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಮೊಳಗಿದೆ. ಕಲಬುರಗಿ ಹೊರವಲಯದಲ್ಲಿ ದರೋಡೆಕೋರ ಇರ್ಫಾನ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿರುವ ಇರ್ಫಾನ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಳೆದ ರಾತ್ರಿ ಬಿದ್ದಾಪುರ ಕ್ರಾಸ್ ಬಳಿ ವೈನ್ ಶಾಪ್ ಮಾಲೀಕರೊಬ್ಬರನ್ನು ಅಡ್ಡಗಟ್ಟಿದ ಇರ್ಫಾನ್ ಮತ್ತು ಆತನ ಸಹಚರರಿಬ್ಬರು, ಹಣ, ಮೊಬೈಲ್, ಬೈಕ್ ಕಸಿದು ಪರಾರಿಯಾಗಿದ್ದಾರೆ.

ಬೆಳಗಿನ ಜಾವ ಇರ್ಫಾನ್ ಮತ್ತು ಆತನ ಸಂಗಡಿಗರನ್ನು ಬಂಧಿಸಲು ಫರಹತಾಬಾದ್ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ತೆರಳಿದ್ದಾರೆ.

ದಾಳಿಯ ವೇಳೆ ದುಷ್ಕರ್ಮಿಗಳು ಇಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಪಿ.ಎಸ್.ಐ. ವಾಹೀದ್ ಕೊತ್ವಾಲ್, ಪೇದೆಗಳಾದ ಕೇಶವ, ಬಾದ್ ಶಹಾ ಅವರಿಗೆ ಗಾಯಗಳಾಗಿವೆ.

ಆಗ ಆತ್ಮರಕ್ಷಣೆಗಾಗಿ ಇರ್ಫಾನ್ ಮೇಲೆ ಗುಂಡು ಹಾರಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...