alex Certify
ಕನ್ನಡ ದುನಿಯಾ       Mobile App
       

Kannada Duniya

ಹೆರಿಗೆಯ ಬಳಿಕ ಯಡವಟ್ಟಾಯ್ತು….

ಕಲಬುರಗಿ: ಹೆರಿಗೆಯ ಬಳಿಕ ಗಂಡು ಮಗು ಜನಿಸಿದೆ ಎಂದು ಬಾಣಂತಿಯ ಪೋಷಕರಿಗೆ ಮಗು ಕೊಟ್ಟಿದ್ದ ವೈದ್ಯರು ಬೆಳಿಗ್ಗೆ ವಾಪಸ್ ಪಡೆದ ಆರೋಪ ಕೇಳಿ ಬಂದಿದೆ.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬೆಳಿಗ್ಗೆ ಹೆಣ್ಣು ಮಗು ಕೊಟ್ಟ ಆಸ್ಪತ್ರೆಯ ಸಿಬ್ಬಂದಿ, ಗಂಡು ಮಗುವನ್ನು ವಾಪಸ್ ಪಡೆದಿದ್ದು, ಇದರಿಂದ ಆಕ್ರೋಶಗೊಂಡ ಬಾಣಂತಿಯ ಕುಟುಂಬದವರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಜೇವರ್ಗಿ ತಾಲ್ಲೂಕಿನ ಕೋಣಶಿರಸಗಿ ಗ್ರಾಮದ ನಂದಮ್ಮ ಅವರಿಗೆ ರಾತ್ರಿ ಹೆರಿಗೆಯಾಗಿದ್ದು, ಗಂಡು ಮಗು ಜನಿಸಿದೆ ಎಂದು ವೈದ್ಯರು ಪೋಷಕರ ಕೈಗೆ ಮಗು ಕೊಟ್ಟಿದ್ದಾರೆ. ಆದರೆ, ಅದನ್ನು ವಾಪಸ್ ಪಡೆದಿದ್ದಾರೆ.

ನಂದಮ್ಮರಿಗೆ ಹೆರಿಯಾದ ಸಂದರ್ಭದಲ್ಲೇ ಮತ್ತೊಬ್ಬರಿಗೆ ಹೆರಿಗೆಯಾಗಿದ್ದು, ಅವರಿಗೆ ಜನಿಸಿದ ಗಂಡು ಮಗುವನ್ನು ನಂದಮ್ಮರ ಪೋಷಕರಿಗೆ ನೀಡಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಹೀಗಾಗಿದೆ.

ಆದರೆ, ಇದನ್ನು ಒಪ್ಪಲು ಸಿದ್ಧವಿಲ್ಲದ ನಂದಮ್ಮ ಕುಟುಂಬದವರು ಗಂಡು ಮಗುವಿಗಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...