alex Certify
ಕನ್ನಡ ದುನಿಯಾ       Mobile App
       

Kannada Duniya

ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಟ್ರಯಲ್ ಲ್ಯಾಂಡಿಂಗ್ ಆರಂಭ

ಕಲಬುರಗಿಯಲ್ಲಿ ಇಂದಿನಿಂದ ವಿಮಾನಗಳ ಪ್ರಾಯೋಗಿಕ ಹಾರಾಟ ನಡೆಯಲಿದೆ. ಈ ಮೂಲಕ ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಬಹು ದಿನಗಳ ಕನಸು ನನಸಾಗಲಿದೆ.

ಇಲ್ಲಿನ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿಯಿರುವ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಟ್ರಯಲ್ ಲ್ಯಾಂಡಿಂಗ್ ನಡೆಯಲಿದ್ದು, ಬೆಳಗ್ಗೆ 10.30 ರಿಂದ 11 ಗಂಟೆಯೊಳಗೆ ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಮಿಸಲಿರುವ ಡೈಮಂಡ್ ಡಿಎ 40 ಹಾಗೂ ಡೈಮಂಡ್ ಡಿಎ 42 ಹೆಸರಿನ ಎರಡು ವಿಮಾನಗಳು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗಲಿವೆ.

ವಿಮಾನದ ಪ್ರಾಯೋಗಿಕ ಹಾರಾಟ ಹಿನ್ನಲೆಯಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಹೈದರಾಬಾದ್ ಏಷಿಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿ ತಂಡದವರು ವಿಮಾನದ ಟ್ರಯಲ್ ಲ್ಯಾಂಡಿಂಗ್​ಗೆ ಮುನ್ನ ರನ್​ ವೇ ಮೇಲೆ ಫಾರೆನ್ ಆಬ್ಜೆಕ್ಟ್ ಡ್ಯಾಮೇಜ್ ಕುರಿತು ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ 2008 ರಲ್ಲಿ 175 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿದ್ದ ವಿಮಾನ ನಿಲ್ದಾಣ ಕಾಮಗಾರಿ ಈಗ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ವಿಮಾನಗಳ ಸಂಪೂರ್ಣ ಹಾರಾಟ ಕೂಡ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...