alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಪ್ಪರ್ ಡಿಕ್ಕಿಯಾಗಿ ರಸ್ತೆ ಬದಿ ನಿಂತಿದ್ದ ನಾಲ್ವರ ಸಾವು

ಕಲಬುರಗಿ: ಟಿಪ್ಪರ್ ಡಿಕ್ಕಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ನಡೆದಿದೆ.

ಆಂಧ್ರದೇಶದ ವೆಲ್ಲೂರಿನ ಲಕ್ಷ್ಮಿ(55), ದಾಸವ್ವಾ(45), ಸುನಿತಾ(2) ಹಾಗೂ 1 ವರ್ಷದ ಗಂಡು ಮಗು ಮೃತಪಟ್ಟವರು. ಇವರೆಲ್ಲಾ ಮಗುವಿನ ಜವಳ ತೆಗೆಸಲು ಮುಗಳಖೇಡಕ್ಕೆ ಹೊರಟಿದ್ದರು. ಜೇವರ್ಗಿ ಬಸ್ ಡಿಪೋ ಬಳಿ ರಸ್ತೆ ಬದಿ ಡಾಬಾದಲ್ಲಿ ಊಟಕ್ಕೆ ಬಸ್ ನಿಲ್ಲಿಸಿದ್ದು, ಇವರೆಲ್ಲಾ ಬಸ್ ಇಳಿದು ರಸ್ತೆ ಬದಿ ನಿಂತಿದ್ದಾರೆ.

ಈ ವೇಳೆ ಅತಿ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೇವರ್ಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...