alex Certify
ಕನ್ನಡ ದುನಿಯಾ       Mobile App
       

Kannada Duniya

ನಿಷೇಧಾಜ್ಞೆಯಿಂದ ಮರೆಯಾಯ್ತು ಹಬ್ಬದ ಸಂಭ್ರಮ

144-sect

ಕಲಬುರಗಿ: ದೇವಾಲಯವನ್ನು ಸುಪರ್ದಿಗೆ ಪಡೆಯಲು ಮೇಳಕುಂದ ಗ್ರಾಮದ 2 ಸಮುದಾಯಗಳ ನಡುವೆ, ಘರ್ಷಣೆ ಉಂಟಾಗಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕಲಬುರಗಿ ಸಮೀಪದ ಮೇಳಕುಂದ ಗ್ರಾಮದ ಸಿದ್ದೇಶ್ವರ ದೇವಾಲಯವನ್ನು ಸುಪರ್ದಿಗೆ ಪಡೆಯಲು 2 ಸಮುದಾಯದವರ ನಡುವೆ ಘರ್ಷಣೆ ನಡೆದಿದ್ದು, ಜಿಲ್ಲಾಡಳಿತದಿಂದ ಸೌಹಾರ್ದ ಸಭೆ ನಡೆಸಲಾಗಿದೆ. ಆದರೆ, ಸಭೆಯಲ್ಲಿ ಒಮ್ಮತ ಮೂಡದೇ ಘರ್ಷಣೆ ನಡೆದಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಮುಂಜಾಗ್ರತೆ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಸ್ಥಳಕ್ಕೆ ಕಲಬುರಗಿ ತಹಶೀಲ್ದಾರ್ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಗ್ರಾಮದಲ್ಲಿ ಶಾಂತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ಮುಂಜಾಗ್ರತೆ ಕ್ರಮವಾಗಿ ಸಿದ್ಧೇಶ್ವರ ಸ್ವಾಮಿ ಜಾತ್ರೆಗೆ ತಡೆ ನೀಡಲಾಗಿದೆ. ಅಲ್ಲದೇ, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿದ್ಧೇಶ್ವರ ಸ್ವಾಮಿ ದೇವಾಲಯದ ಜಾತ್ರೆಗೆ ತಡೆ ನೀಡಿ, ದೇವಾಲಯವನ್ನು ಜಿಲ್ಲಾಡಳಿತದ ಸುಪರ್ಧಿಗೆ ಪಡೆಯಲಾಗಿದೆ. ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮರೆಯಾಗಿದೆ. ಬಿಗುವಿನ ವಾತಾವರಣ ಇದ್ದು, ಭದ್ರತೆಗೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...