alex Certify
ಕನ್ನಡ ದುನಿಯಾ       Mobile App
       

Kannada Duniya

‘ಕುರುಬರ ಮತಗಳು ಸಿ.ಎಂ. ಜೇಬಿನಲ್ಲಿವೆಯೇ..?’

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.

ಡಾ. ಯತೀಂದ್ರ ಇಂಡಸ್ಟ್ರೀಸ್ ಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಕಳ್ಳನಿಗೆ ಕಳ್ಳ ಎಂದರೆ ಸಿಟ್ಟು ಬರುತ್ತದೆ. ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ್ರೇ ದೊಡ್ಡ ಮನುಷ್ಯರಾಗ್ತಾರೆ. ಯತೀಂದ್ರ ವಿರುದ್ಧ ಸೂಕ್ತ ದಾಖಲೆ ನೀಡಿದ್ದರೂ, ಸಿ.ಎಂ. ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ. ಇದು ಅವರ ಭಂಡತನದ ಪರಮಾವಧಿಯಾಗಿದೆ. ಮಾನನಷ್ಟ ಮೊಕದ್ದಮೆ ಹಾಕಿದಲ್ಲಿ ಅವರಿಗೇ ತಿರುಗೇಟು ಆಗುತ್ತದೆ ಎಂದು ಹೇಳಿದ್ದಾರೆ.

ಐ.ಟಿ. ಅಧಿಕಾರಿಗಳ ಮೇಲೆ ಎ.ಸಿ.ಬಿ. ದಾಳಿ, ಬ್ಲಾಕ್ ಮೇಲ್ ತಂತ್ರವಾಗಿದೆ ಎಂದ ಅವರು, ಬಹಿರಂಗವಾಗಿ ಜಾತಿ ಮುಂದಿಟ್ಟುಕೊಂಡು ಮತ ಕೇಳುತ್ತಾರೆ. ಇಂತಹ ಸಿ.ಎಂ.ರನ್ನು ನಾನೆಂದೂ ನೋಡಿಲ್ಲ. ಕುರುಬರ ಮತಗಳು ಸಿ.ಎಂ. ಸಿದ್ಧರಾಮಯ್ಯ ಜೇಬಿನಲ್ಲಿವೆಯೇ ಎಂದು ಪ್ರಶ್ನಿಸಿದ್ದಾರೆ.

ಸಿದ್ಧರಾಮಯ್ಯನವರು ಕುರುಬರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರಲ್ಲದೇ, ಸಿದ್ಧರಾಮಯ್ಯ ಯಾವಾಗ ಕೆಳಗಿಳಿಯುತ್ತಾರೆ ಎಂದು ಹಿಂದುಳಿದ ವರ್ಗಗಳ ಮಠಾಧೀಶರು ಕಾಯುತ್ತಿದ್ದಾರೆ. ದಲಿತರನ್ನು, ಹಿಂದುಳಿದವರನ್ನು ತುಳಿಯುವುದೇ ಸಿ.ಎಂ. ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.

ತಮ್ಮನ್ನು ಕಾಂಗ್ರೆಸ್ ಗೆ ಕರೆತಂದ ಹೆಚ್. ವಿಶ್ವನಾಥ್ ಅವರನ್ನು ಕಡೆಗಣಿಸಿದ್ರು. ಕಾಂಗ್ರೆಸ್ ನಲ್ಲಿ ಪ್ರಜಾಫ್ರಭುತ್ವವಿದ್ದರೆ, ಪಕ್ಷದ ಅಧ್ಯಕ್ಷರು ಮಧ್ಯ ಪ್ರವೇಶಿಸಬೇಕಿತ್ತು. ಆದರೆ, ಹಾಗೇ ಆಗಲಿಲ್ಲ. ಇನ್ನು ಮುಂದಿನ ಮುಖ್ಯಮಂತ್ರಿ ನಾನೇ ಎಂದು ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷರನ್ನು ಸೋಲಿಸಲು ಸಿ.ಎಂ. ತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿ.ಹೆಚ್. ವಿಜಯಶಂಕರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾರೇ ಕಾಂಗ್ರೆಸ್ ಸೇರಿದ್ರೂ ಅಲ್ಲಿರುವುದು ಕಷ್ಟ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...