alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಕೊಟ್ಟ ಶಾಸಕ, ಈಶ್ವರಪ್ಪಗೆ ಕ್ಲಾಸ್ ತೆಗೆದುಕೊಂಡ ಜಾವಡೇಕರ್?

ಬೆಂಗಳೂರು: ಬಿ.ಜೆ.ಪಿ. ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಪಕ್ಷದ ನಾಯಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಳಿಗ್ಗೆಯಷ್ಟೇ ರಾಣೆಬೆನ್ನೂರು ಕೆ.ಪಿ.ಜೆ.ಪಿ. ಶಾಸಕ ಆರ್. ಶಂಕರ್ ಅವರನ್ನು ಬಿ.ಎಸ್.ವೈ ನಿವಾಸಕ್ಕೆ ಈಶ್ವರಪ್ಪ ಕರೆದುಕೊಂಡು ಬಂದಿದ್ದರು. ಬೆಳಿಗ್ಗೆ ಬಿ.ಜೆ.ಪಿ.ಗೆ ಬೆಂಬಲ ಘೋಷಿಸಿದ್ದ ಶಂಕರ್, ಸಂಜೆ ಕಾಂಗ್ರೆಸ್ ಕ್ಯಾಂಪ್ ನಲ್ಲಿ ಕಾಣಿಸಿಕೊಂಡಿದ್ದು, ಜೆ.ಡಿ.ಎಸ್. –ಕಾಂಗ್ರೆಸ್ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದಾರೆ.

ಈ ಬೆಳವಣಿಗೆ ಹಿನ್ನಲೆಯಲ್ಲಿ ಬಿ.ಜೆ.ಪಿ. ನಾಯಕರು ಈಶ್ವರಪ್ಪ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಂಬಂಧಿಯೇ ಆಗಿರುವ ಶಾಸಕ ಶಂಕರ್ ಅವರನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲ. ನಿಮ್ಮ ಜೊತೆಗಿದ್ದರೂ, ಅವರನ್ನು ಕಾಂಗ್ರೆಸ್ ನವರು ಸಂಪರ್ಕಿಸಿದ್ದು ಹೇಗೆ ಎಂದು ಬಿ.ಜೆ.ಪಿ. ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಮಲ್ಲೇಶ್ವರಂ ಬಿ.ಜೆ.ಪಿ. ಕಚೇರಿಗೆ ಈಶ್ವರಪ್ಪ ಅವರನ್ನು ಕರೆಸಿಕೊಂಡ ಪ್ರಕಾಶ್ ಜಾವಡೇಕರ್ ಮತ್ತು ಇತರ ಕೇಂದ್ರ ನಾಯಕರು, ನಿಮ್ಮ ಜೊತೆಗೇ ಇದ್ದ ಆರ್. ಶಂಕರ್ ಕಾಂಗ್ರೆಸ್ ಸಂಪರ್ಕಕ್ಕೆ ಸಿಕ್ಕು ಬೆಂಬಲ ನೀಡಿದ್ದು ಹೇಗೆ? ಎಂದು ಪ್ರಶ್ನಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಲ್ಲವನ್ನು ಗಮನಿಸುತ್ತಿದ್ದು, ನೀವೇ ಉತ್ತರ ನೀಡಿ ಎಂದು ಹೇಳಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...