alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ಆತ್ಮಹತ್ಯೆ ಕೇಸ್: ಕೆ.ಜೆ. ಜಾರ್ಜ್ ವಿಚಾರಣೆ

K J George

ಬೆಂಗಳೂರು: ಡಿ.ವೈ.ಎಸ್.ಪಿ., ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್ ಅವರನ್ನು ಸಿ.ಐ.ಡಿ. ವಿಚಾರಣೆಗೊಳಪಡಿಸಿದೆ. ಬೆಂಗಳೂರಿನ ಸಿ.ಐ.ಡಿ. ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.

ಜುಲೈ 7 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಗಣಪತಿ ಅವರು, ತಮ್ಮ ಸಾವಿಗೆ ಕಾರಣ ಎಂದು ಸಚಿವರಾಗಿದ್ದ ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ತನಿಖೆಯನ್ನು ಸಿ.ಐ.ಡಿ.ಗೆ ವಹಿಸಲಾಗಿತ್ತು. ತನಿಖೆ ಕೈಗೊಂಡಿರುವ ಸಿ.ಐ.ಡಿ. ಇಂದು ಮಾಜಿ ಸಚಿವ ಜಾರ್ಜ್ ಅವರ ವಿಚಾರಣೆ ನಡೆಸಿದೆ ಎಂದು ಹೇಳಲಾಗಿದೆ.

ಸಿ.ಐ.ಡಿ. ಹಿರಿಯ ಅಧಿಕಾರಿಗಳಾದ ಎ.ಡಿ.ಜಿ.ಪಿ ಪ್ರತಾಪ್ ರೆಡ್ಡಿ, ಡಿ.ಐ.ಜಿ. ಸೋನಿಯಾ ನಾರಂಗ್ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ. ಶ್ರೀಧರ್ ವಿಚಾರಣೆ ನಡೆಸಿ, ಗಣಪತಿ ಮಾಡಿದ್ದ ಆರೋಪಗಳ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...