alex Certify
ಕನ್ನಡ ದುನಿಯಾ       Mobile App
       

Kannada Duniya

ಚರ್ಚೆಗೆ ಕಾರಣವಾದ ಕಾಂಗ್ರೆಸ್ ನಾಯಕನ ಲೈಂಗಿಕ ದೌರ್ಜನ್ಯ ಪ್ರಕರಣ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ರಾಜಕೀಯ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಕೇರಳದಲ್ಲಿ ಬಹುಕೋಟಿ ಸೋಲಾರ್ ಹಗರಣದ ತನಿಖೆ ನಡೆಸಿದ ನ್ಯಾ. ಜಿ. ಶಿವರಾಜನ್ ನೇತೃತ್ವದ ಆಯೋಗ, ನೀಡಿದ್ದ ವರದಿಯನ್ನು ವಿಧಾಸಭೆಯಲ್ಲಿ ಮಂಡಿಸಲಾಗಿದೆ.

ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್, ತಮ್ಮ ಮೇಲೆ ಕೇರಳದ ಮಾಜಿ ಸಿ.ಎಂ. ಉಮ್ಮನ್ ಚಾಂಡಿ, ಕಾಂಗ್ರೆಸ್ ಮುಖಂಡರಾದ ಕೆ.ಸಿ. ವೇಣುಗೋಪಾಲ್, ಆಡೂರ್ ಪ್ರಕಾಶ್, ಎ.ಪಿ. ಅನಿಲ್ ಕುಮಾರ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವುದು ವರದಿಯಲ್ಲಿ ದಾಖಲಾಗಿದೆ.

ಕೇರಳದಲ್ಲಿನ ಈ ಪ್ರಕರಣ ಕರ್ನಾಟಕದಲ್ಲಿಯೂ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಉಸ್ತುವಾರಿಯನ್ನು ಹಿಂದಕ್ಕೆ ಕಳುಹಿಸಬೇಕೆಂದು ಬಿ.ಜೆ.ಪಿ. ನಾಯಕರು ಒತ್ತಾಯಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಕೇರಳ ವಿಧಾನಸಭೆಯಲ್ಲಿ ಮಂಡಿಸಲಾದ ವರದಿಯಲ್ಲಿ ವೇಣುಗೋಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಲ್ಲಿದ್ದು, ಅವರನ್ನು ಹಿಂದಕ್ಕೆ ಕಳಿಸಬೇಕೆಂದು ಹೇಳಿದ್ದಾರೆ.

ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೂಡ, ಅತ್ಯಾಚಾರಿಗಳು ಬರದಂತೆ ತಡೆಯಿರಿ ಎಂದು ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಹೇಳಿದ್ದಾರೆ. ಸಿದ್ಧರಾಮಯ್ಯನವರೇ ನಿಮ್ಮ ಪಕ್ಷದ ಉಸ್ತುವಾರಿ ಅತ್ಯಾಚಾರಿ ಎಂದು ಟೀಕಿಸಿದ್ದಾರೆ.

ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಆರೋಪ ಎದುರಿಸುತ್ತಿರುವ ವೇಣುಗೋಪಾಲ್ ಅವರನ್ನೇ ಉಸ್ತುವಾರಿಯಾಗಿ ಮುಂದುವರೆಸುವ ಕಾಂಗ್ರೆಸ್ ಪಕ್ಷದ ದುರ್ಗತಿ ಬಗ್ಗೆ ರಾಜ್ಯದ ಜನರು ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.

ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು, ವೇಣುಗೋಪಾಲ್ ಅವರ ವಿರುದ್ಧ ಮಾಡಿರುವ ಆರೋಪ ಆಧಾರರಹಿತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವೇಣುಗೋಪಾಲ್ ಹುರುಪು ತಂದಿದ್ದು, ಇದನ್ನು ಸಹಿಸದ ಬಿ.ಜೆ.ಪಿ.ಯವರು ಅವರನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...