alex Certify
ಕನ್ನಡ ದುನಿಯಾ       Mobile App
       

Kannada Duniya

ಜೋಗ್ ಫಾಲ್ಸ್ ಗೆ ಇಳಿದ ಸಾಹಸಿ ಜ್ಯೋತಿರಾಜ್ ನಾಪತ್ತೆ…?

ಶಿವಮೊಗ್ಗ: ಜೋಗ್ ಫಾಲ್ಸ್ ಗೆ ಇಳಿದಿದ್ದ ಸಾಹಸಿ ಜ್ಯೋತಿರಾಜ್ ನಾಪತ್ತೆಯಾಗಿದ್ದಾರೆ. ಜೋಗಫಾಲ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದವರೊಬ್ಬರ ಮೃತದೇಹವನ್ನು ಮೇಲಕ್ಕೆತ್ತಲು ಅವರು ಬೆಳಿಗ್ಗೆ ಚಿತ್ರದುರ್ಗದಿಂದ ಹೊರಟಿದ್ದು, ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ್ ಫಾಲ್ಸ್ ಗೆ ಇಳಿದ ಅವರು, ಮೃತದೇಹ ಹೊರ ತೆಗೆಯುವ ಪ್ರಯತ್ನದಲ್ಲಿ ನಾಪತ್ತೆಯಾಗಿದ್ದಾರೆ.

ಸಾಹಸಿಯಾಗಿದ್ದ ಜ್ಯೋತಿರಾಜ್ ಹಲವಾರು ಸಲ ಜೋಗ್ ಫಾಲ್ಸ್ ನಲ್ಲಿ ಮೃತದೇಹಗಳನ್ನು ಹೊರ ತೆಗೆದಿದ್ದರು. ಮಂಜುನಾಥ್ ಎಂಬ ಯುವಕ ಶುಕ್ರವಾರ ಫಾಲ್ಸ್ ಗೆ ಬಿದ್ದಿದ್ದು, ಆತನ ಪತ್ತೆಗಾಗಿ ಜ್ಯೋತಿರಾಜ್ ಜೋಗ್ ಫಾಲ್ಸ್ ಗೆ ಇಳಿದಿದ್ದವರು ಮೇಲೆ ಬಂದಿಲ್ಲ.

ಜ್ಯೋತಿರಾಜ್ ಮೇಲೆ ಬರಬಹುದೆಂಬ ವಿಶ್ವಾಸದಲ್ಲಿ ಅವರ ಸ್ನೇಹಿತರಿದ್ದಾರೆ. ಆದರೆ, ರಾತ್ರಿಯಾದರೂ, ಜ್ಯೋತಿರಾಜ್ ಸುಳಿವು ಪತ್ತೆಯಾಗಿಲ್ಲ. ಬೆಳಿಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡುತ್ತಿದ್ದ ಜ್ಯೋತಿರಾಜ್, ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಜೋಗದಲ್ಲಿ ಆತ್ಮಹತ್ಯೆ ಮಾಡಿಕೊಂಡವರೊಬ್ಬರ ಪತ್ತೆಗೆ ತೆರಳುತ್ತಿದ್ದೇನೆ. ವಾಪಸ್ ಬರ್ತಿನೋ ಇಲ್ವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬರಿಗೈಯಲ್ಲಿ ಕಟ್ಟಡ, ಬಂಡೆ, ಕೋಟೆ ಹತ್ತುವ ಸಾಹಸಿಯಾಗಿರುವ ಜ್ಯೋತಿರಾಜ್ ನಾಡಿನೆಲ್ಲೆಡೆ ಹೆಸರು ವಾಸಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...