alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿಯಿಡಿ ಫಾಲ್ಸ್ ನಲ್ಲಿದ್ದ ಜ್ಯೋತಿರಾಜ್ ಗೆ ಆಗಿದೆ ಇಂತಹ ಅನುಭವ

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹವನ್ನು ಮೇಲಕ್ಕೆತ್ತಲು ಜೋಗ ಜಲಪಾತಕ್ಕೆ ಇಳಿದು ನಾಪತ್ತೆಯಾಗಿದ್ದ ಸಾಹಸಿ ಜ್ಯೋತಿರಾಜ್(ಕೋತಿರಾಜ್) ಅವರನ್ನು ರಕ್ಷಿಸಲಾಗಿದೆ.

ನಿನ್ನೆ ಮಧ್ಯಾಹ್ನ ಜಲಪಾತಕ್ಕೆ ಇಳಿದಿದ್ದ ಜ್ಯೋತಿರಾಜ್ ಸುಮಾರು 300 ಅಡಿ ಆಳಕ್ಕೆ ಇಳಿದು ಹುಡುಕಾಟ ನಡೆಸಿದ್ದಾರೆ. ಮೃತದೇಹ ಹುಡುಕಾಟ ನಡೆಸುವ ಪ್ರಯತ್ನದಲ್ಲಿ 15 ಅಡಿ ಆಳದ ಕಲ್ಲು ಸಂದಿಗೆ ಜಾರಿದ್ದಾರೆ. ಅಲ್ಲಿ ಪಾಚಿ ಕಟ್ಟಿದ್ದ ಕಾರಣ ಮೇಲೆ ಬರಲು ಸಾಧ್ಯವಾಗಿರಲಿಲ್ಲ.

ನಿನ್ನೆ ಮಧ್ಯಾಹ್ನ ಫಾಲ್ಸ್ ಗೆ ಇಳಿದ ಜ್ಯೋತಿರಾಜ್ ರಾತ್ರಿಯಾದರೂ ಮೇಲೆ ಬರದಿದ್ದಾಗ, ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಬೆಳಿಗ್ಗೆಯಿಂದಲೇ ಡ್ರೋಣ್ ಬಳಸಿ ಹುಡುಕಾಟ ನಡೆಸಿದ್ದಾರೆ. ಬಂಡೆಯ ಜಾರಿನಲ್ಲಿದ್ದ ಜ್ಯೋತಿರಾಜ್ ಅವರನ್ನು ರಕ್ಷಿಸಲಾಗಿದೆ.

ಪಾರಾಗಿ ಬಂದ ಜ್ಯೋತಿರಾಜ್ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಫಾಲ್ಸ್ ನಲ್ಲಿ ಬಂಡೆಗಳ ಸಂದಿಗಳಲ್ಲಿ ಹುಡುಕಾಟ ನಡೆಸುವಾಗ ಆಳದ ಸಂದಿಗೆ ಜಾರಿದೆ. ಬಂಡೆಗೆ ಪಾಚಿ ಕಟ್ಟಿದ್ದರಿಂದ ಅಲ್ಲಿಂದ ಪಾರಾಗಿ ಬರಲು ಸಾಧ್ಯವಾಗಲಿಲ್ಲ. ಕೈಗೆ ಗಾಯವಾಗಿ ನಿತ್ರಾಣಗೊಂಡಿದ್ದೆ. ಮೇಲೆ ಬರಲು ಸಾಧ್ಯವಾಗದೇ ಇದ್ದಾಗ, ಅಲ್ಲೇ ರಾತ್ರಿ ಕಳೆಯಬೇಕಾಯಿತು. ಸಣ್ಣ ಕಲ್ಲುಗಳಿಂದ ಪಾಚಿಯನ್ನು ಉಜ್ಜಿ ದಾರಿ ಮಾಡಿಕೊಂಡು ಮೇಲೆ ಬಂದಾಗ, ರಕ್ಷಣಾ ತಂಡ ಕಾಣಿಸಿತು. ಇದರಿಂದ ಪಾರಾಗಿ ಮೇಲೆ ಬರಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...