alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಪ್ಪಳದ ಗಂಗಮ್ಮನ ಗಾಯನಕ್ಕೆ ನೆಟ್ಟಿಗರು ಫುಲ್ ಫಿದಾ

ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲ. ಹಾಗೆ ಊರು, ಗಲ್ಲಿಯ ಗಡಿಯಿಲ್ಲ. ಸಾಮಾಜಿಕ ಜಾಲತಾಣ ಮೂಲೆ ಮೂಲೆಯ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡ್ತಿದೆ. ಇದಕ್ಕೆ ಕೊಪ್ಪಳದ ಗಂಗಮ್ಮ ಉತ್ತಮ ನಿದರ್ಶನ.

ಕೊಪ್ಪಳದ ಗಂಗಮ್ಮ ಜೂನಿಯರ್ ಜಾನಕಿ ಎಂದೇ ಹೆಸರು ಪಡೆಯುತ್ತಿದ್ದಾರೆ. ರಾತ್ರೋರಾತ್ರಿ ಗಂಗಮ್ಮ ಪ್ರಸಿದ್ಧಿಗೆ ಬಂದಿದ್ದಾರೆ. ಆದ್ರೆ ಗಂಗಮ್ಮ ಪ್ರತಿಭೆ ಇಂದಿನದಲ್ಲ. 20 ವರ್ಷಗಳ ಹಾಡಿನ ಅನುಭವ ಗಂಗಮ್ಮನವರಿಗಿದೆ. ಗಂಗಮ್ಮ ಆರ್ಕೆಸ್ಟ್ರಾದಲ್ಲಿ ಹಾಡ್ತಿದ್ದರಂತೆ. ಕೇಳಿದ್ರೆ ಮತ್ತೆ ಮತ್ತೆ ಕೇಳಬೇಕೆನ್ನಿಸುವ ಅದ್ಬುತ ದ್ವನಿ ಹೊಂದಿದ್ದಾರೆ ಗಂಗಮ್ಮ.

ಗಂಗಮ್ಮ ಕೆಲ ದಿನಗಳ ಕಾಲ ಹಾಡಿನಿಂದ ದೂರವಿದ್ದರು. ಈಗ ಮತ್ತೆ ಹಾಡಲು ಶುರು ಮಾಡಿದ್ದಾರೆ. ಅವ್ರ ವಿಡಿಯೋವೊಂದನ್ನು ಸ್ಟುಡಿಯೋ ಮಾಲೀಕ ಶಿವಪ್ರಸಾದ್ ಲೈವ್ ಮಾಡಿದ್ದರು. ಈ ವಿಡಿಯೋಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 24 ಗಂಟೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಗಂಗಮ್ಮ ಹಾಡು ಕೇಳಿದ್ದಾರೆ. 10 ಸಾವಿರ ಬಾರಿ ಹಾಡಿನ ವಿಡಿಯೋ ಹಂಚಿಕೆಯಾಗಿದೆ.

50 ವರ್ಷದ ಗಂಗಮ್ಮನಿಗೆ ಮೂವರು ಮಕ್ಕಳು. ಬಾಲ್ಯದಲ್ಲಿಯೇ ಹಾಡಿನಲ್ಲಿ ಆಸಕ್ತಿ ಹೊಂದಿದ್ದ ಗಂಗಮ್ಮ ಕೂಲಿ ಕೆಲಸ ಮಾಡ್ತಾರೆ. ಓದಿದ್ದು ನಾಲ್ಕನೇ ಕ್ಲಾಸ್ ವರೆಗೆ ಮಾತ್ರ. ಜಾನಕಿಯಮ್ಮ ಬಂದಿದ್ದ ಕಾರ್ಯಕ್ರಮವೊಂದರಲ್ಲಿ ಗಂಗಮ್ಮ ಹಾಡಿದ್ದರಂತೆ. ಆಗ ನೀನೇ ಜಾನಕಿ, ನಾನಲ್ಲವೆಂದು ಜಾನಕಿಯಮ್ಮ ಹೇಳಿದ್ದರಂತೆ. ಅದಾದ ನಂತ್ರ ಗಂಗಮ್ಮ ಜೂನಿಯರ್ ಜಾನಕಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಕೊಪ್ಪಳದ ಸುತ್ತಮುತ್ತ ಮದುವೆ ಸಮಾರಂಭಗಳಲ್ಲಿ ಹಾಡ್ತಿದ್ದ ಗಂಗಮ್ಮನ ಕಂಠ ಈಗ ದೇಶದ ಜನರ ಗಮನ ಸೆಳೆದಿದೆ. ಬೇರೆ ರಾಜ್ಯಗಳ ಜನರು ಕೂಡ ಗಂಗಮ್ಮ ದ್ವನಿಗೆ ತಲೆದೂಗುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...