alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪಾಜಿ ಕ್ಯಾಂಟೀನ್ ಗೆ ಒಂದು ವರ್ಷ: ಇಂದಿನಿಂದ ಮುದ್ದೆ ಜೊತೆ ಜೋಳದ ರೊಟ್ಟಿ ಊಟ

ಬೆಂಗಳೂರು:  ಅಪ್ಪಾಜಿ ಕ್ಯಾಂಟೀನ್ ಗೆ ಇಂದು ಒಂದು ವರ್ಷದ ಸಂಭ್ರಮ. ಈ ಸಂಭ್ರಮಾಚರಣೆ ಹಿನ್ನಲೆಯಲ್ಲೇ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಮುದ್ದೆ ಊಟ, ಬಸ್ಸಾರಿನ ಜತೆಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ ನೀಡುವ ಮೂಲಕ ಅಖಂಡ ಕರ್ನಾಟಕದ ಏಕತೆ ಭಾವವನ್ನು ಒಂದೇ ಸೂರಿನಲ್ಲಿ ನೀಡಲಾಗುತ್ತಿದೆ.

ಹೌದು. ಇಂದಿನಿಂದ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಮುದ್ದೆ ಊಟದ ಜತೆ ಜೋಳದ ರೊಟ್ಟಿ ಸವಿಯನ್ನೂ ಸವಿಯಬಹುದಾಗಿದೆ. 5 ರೂ.ಗೆ ಒಂದು ಮುದ್ದೆ ಬಸ್ಸಾರು ಹಾಗೂ 5 ರೂ. ಗೆ ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ ಸವಿಯಬಹುದು. ಕೇವಲ 10 ರೂ. ಗೆ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಊಟವನ್ನು ತಿನ್ನಬಹುದು.

ಅಪ್ಪಾಜಿ ಕ್ಯಾಂಟೀನ್ ನ ವರ್ಷದ ಸಂಭ್ರಮದ ಹಿನ್ನಲೆಯಲ್ಲಿ ಹನುಮಂತ ನಗರದ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಇಂದು ವಿಶೇಷ ಊಟದ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಗೆದ್ದವರಿಗೆ ಭರ್ಜರಿ ಬಹುಮಾನವನ್ನು ಘೋಷಿಸಲಾಗಿದ್ದು, ಮೊದಲ ಬಹುಮಾನ ಪಡೆದವರಿಗೆ 30 ದಿನಗಳ ಕಾಲ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ಫ್ರೀಯಾಗಿ ನೀಡಲಾಗುತ್ತದೆ. ಆದರೆ ಸ್ಪರ್ಧಿಗಳು ಆಯೋಜಕರು ನೀಡಿರುವ 10 ನಿಮಿಷಗಳಲ್ಲಿ ನಿಮಗಿಷ್ಟವಾದ ಜೋಳದ ರೊಟ್ಟಿ-ಪಲ್ಯ ಅಥವಾ ಮುದ್ದೆ-ಬಸ್ಸಾರನ್ನು ತಿಂದು ಮುಗಿಸಬೇಕು.

ದೇವೇಗೌಡರ ಅಪ್ಪಾಜಿ ಕ್ಯಾಂಟೀನ್ ಒಂದು ವರ್ಷ ಆಚರಿಸುತ್ತಿರುವ ಹಿನ್ನಲೆಯಲ್ಲಿ ಕ್ಯಾಂಟೀನ್ ಮಾಲೀಕ ಜೆಡಿಎಸ್ ಶಾಸಕ ಶರವಣ ಪ್ರತಿಕ್ರಿಯಿಸಿದ್ದು, ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ರಾಜಕೀಯ ಹೆಸರಿನಲ್ಲಿ ರಾಜ್ಯವನ್ನು ಒಡೆಯುವ ಹುನ್ನಾರ ನಡೆದಿದೆ. ಉತ್ತರ ಕರ್ನಾಟಕವನ್ನು ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಲಕ್ಷ್ಯ ಮಾಡಿದ್ದಾರೆ ಎಂಬ ಸುಳ್ಳು ಆರೋಪಗಳು ಕೇಳಿಬರುತ್ತಿವೆ. ಆದರೆ ನಾವು ಇಂದಿನಿಂದ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಊಟವನ್ನು ಒಂದೇ ಸ್ಥಳಗಳಲ್ಲಿ ಸವಿಯುವ ವ್ಯವಸ್ಥೆ ಮಾಡಿದ್ದು, ಈ ಮೂಲಕ ಏಕತೆಯ ಭಾವನೆ ಬೆಸೆಯಲು ಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...