alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವಕಳೆ ಪಡೆದ ಜೋಗದ ವೈಭವ ಕಣ್ತುಂಬಿಕೊಂಡ ಪ್ರವಾಸಿಗರು

Jog-Falls

‘ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ….ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ’ ಹೀಗೆ ಜೋಗ ಜಲಪಾತದ ವೈಭವವನ್ನು ಜೀವನದಲ್ಲಿ ಒಮ್ಮೆ ನೋಡಬಬೇಕೆಂಬ ಮಾತು ಪ್ರಚಲಿತದಲ್ಲಿದೆ. ಜೋಗದ ಸಿರಿಗೆ ಮನಸೋಲದವರಿಲ್ಲ.

ರಾಜ, ರಾಣಿ ರೋರರ್, ರಾಕೆಟ್ ಜಲಧಾರೆಗಳಿಂದ ಧುಮ್ಮಿಕ್ಕುವ ಹಾಲಿನಂತಹ ನೀರನ್ನು ಕಣ್ತುಂಬಿಕೊಳ್ಳುವುದೇ ಪ್ರವಾಸಿಗರಿಗೆ ಹಬ್ಬ. ಶರಾವತಿ ಕಣಿವೆಯಲ್ಲಿ ಮುಂಗಾರು ಮಳೆ ಜೋರಾಗಿದ್ದು, ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರೊಂದಿಗೆ ನದಿ ಪಾತ್ರದಲ್ಲಿ ನೀರು ಹೆಚ್ಚಿದ್ದು, ಜೋಗ ಜಲಪಾತಗಳಿಗೆ ಜೀವ ಕಳೆ ಬಂದಿದೆ.

ಜೀವಕಳೆ ಪಡೆದುಕೊಂಡ ಜೋಗದ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಸಿರು ಸಿರಿಯ ನಡುವೆ ಹಾಲ್ನೊರೆ ಉಕ್ಕಿದಂತೆ ಜಲಪಾತಗಳಿಂದ ನೀರು ಧುಮ್ಮಕ್ಕುತ್ತಿದೆ. ಬೇಸಿಗೆಯಲ್ಲಿ ಬಣಗುಡುವ ಜೋಗದಲ್ಲಿ ಜಲಧಾರೆಗಳು ಬತ್ತಿರುತ್ತವೆ. ಹಾಗಾಗಿ ಪ್ರವಾಸಿಗರ ಸಂಖ್ಯೆ ವಿರಳ. ಮಳೆಗಾಲದಲ್ಲಿ ವೈಭವ ಮರುಕಳಿಸಿದ್ದು, ಇದನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...