alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ- ಬೆಳ್ಳಿ ವಹಿವಾಟು ಬಂದ್

Locked shutters of Shimla shops on budy Mall Road on Saturday during bandh to protest against "cow Slaughter" case at Nerwa in Chopal area of Shimla district. Photo by : Amit Kanwar

ಕೇಂದ್ರ ಸರ್ಕಾರದ ನೀತಿ ವಿರೋಧಿಸಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಚಿನ್ನ- ಬೆಳ್ಳಿ ವರ್ತಕರು ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ 2 ಲಕ್ಷ ರೂ. ಅಥವಾ ಅದಕ್ಕೂ ಮೀರಿದ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಆಭರಣೋದ್ಯಮ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಈ ನಿಯಮ ಜಾರಿಗೆ ತಂದಿರುವುದರಿಂದ ಬಿಡಿ ವ್ಯಾಪಾರ ಹಂತದಲ್ಲಿ ಗ್ರಾಹಕರು ಪ್ಯಾನ್ ಕಾರ್ಡ್ ಹಾಜರುಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ತೆರಿಗೆ ವ್ಯಾಪ್ತಿಗೆ ಬರುವ ಆತಂಕವನ್ನು ಗ್ರಾಹಕರು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಜೆಮ್ಸ್ ಮತ್ತು ಜ್ಯುವೆಲ್ಲರಿ ಉದ್ಯಮವು ಜಿಡಿಪಿಗೆ ಶೇ.3.5 ರಷ್ಟು ಕೊಡುಗೆ ನೀಡುತ್ತಿದೆ. ದೇಶದಲ್ಲಿ ಶೇ.86 ರಷ್ಟು ಮಂದಿಗೆ ಪ್ಯಾನ್ ಕಾರ್ಡ್ ಇಲ್ಲ. ಸರ್ಕಾರ ಕೈಗೊಂಡಿರುವ ಈ ಕ್ರಮದಿಂದ ಅನೈತಿಕವಾಗಿ ವಹಿವಾಟು ನಡೆಸುವವರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ದೂರಲಾಗಿದೆ. ಕೂಡಲೇ ಈ ತೀರ್ಮಾನವನ್ನು ಮರುಪರಿಶೀಲಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...