alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದಲ್ಲಿಯೂ ವಿಭಜನೆಯಾಯ್ತು ಜೆ.ಡಿ.ಯು.

ಬೆಂಗಳೂರು: ಬಿಹಾರದಲ್ಲಿ ಜೆ.ಡಿ.ಯು. 2 ಬಣಗಳಾಗಿ ವಿಭಜನೆಯಾಗಿದ್ದು, ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ಬಣಗಳು ಸೃಷ್ಠಿಯಾಗಿವೆ. ರಾಜ್ಯದಲ್ಲಿಯೂ ಜೆ.ಡಿ.ಯು. ವಿಭಜನೆಯಾಗಿದ್ದು, ನಿತೀಶ್ ಕುಮಾರ್ ಬಣಕ್ಕೆ ಮಾಜಿ ಶಾಸಕ ಮಹಿಮಾ ಪಟೇಲ್ ಅವರು ಅಧ್ಯಕ್ಷರಾಗಿದ್ದಾರೆ. ಶರದ್ ಯಾದವ್ ಅವರ ಬಣಕ್ಕೆ ಡಾ. ಎಂ.ಪಿ. ನಾಡಗೌಡ ಅಧ್ಯಕ್ಷರಾಗಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಎರಡೂ ಬಣದವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ನಾಡಗೌಡ ಅವರು ಜೆ.ಡಿ.ಯು. ಪಕ್ಷದ ಚುನಾವಣೆ ಚಿಹ್ನೆ ‘ಬಾಣ’ದ ಗುರತನ್ನು ತಮ್ಮ ಬಣಕ್ಕೆ ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

1999 ರಲ್ಲಿ ಸಮತಾ ಪಕ್ಷ, ಲೋಕಶಕ್ತಿ, ಜನತಾದಳ ಮೊದಲಾದ ಪಕ್ಷಗಳು ಸೇರಿ ಜೆ.ಡಿ.ಯು. ಅಸ್ತಿತ್ವಕ್ಕೆ ಬಂದಿದ್ದು, ಸುಮಾರು 20 ರಾಜ್ಯ ಘಟಕಗಳು ಶರದ್ ಯಾದವ್ ಅವರ ಜೊತೆಗಿವೆ ಎಂದು ನಾಡಗೌಡ ಹೇಳಿದ್ದಾರೆ. ಪಕ್ಷಕ್ಕೆ ಮರುನಾಮಕರಣ ಮಾಡುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದು, ಜೆ.ಡಿ.ಯು. ಬೆಂಬಲಿತ ಸರ್ಕಾರ ರಚನೆಯಾಗಲಿದೆ ಎಂದು ಮಹಿಮಾ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...