alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿಯ ಆಯುಧ ಪೂಜೆಗೆ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಸಿಕ್ತು ಭರ್ಜರಿ ಗಿಫ್ಟ್!

ಪಕ್ಷ ಸಂಘಟನಾ ಕಾರ್ಯಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಪಕ್ಷದಿಂದಲೇ ಕಾರು ನೀಡಲಾಗುತ್ತದೆ. ಆದರೆ ಜೆಡಿಎಸ್ ನಲ್ಲಿ ಈ ಪದ್ಧತಿ ಇರಲಿಲ್ಲ. ಆದರೆ ಈ ಬಾರಿ ಜೆಡಿಎಸ್ ತಾನೇನು ಕಮ್ಮಿ ಇಲ್ಲವೆಂಬಂತೆ ಆಯುಧ ಪೂಜೆಗೆ ಮೊದಲೇ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್. ವಿಶ್ವನಾಥ್ ಅವರಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದೆ.

ಪಕ್ಷ ಸಂಘಟನಾ ಕಾರ್ಯಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಾದ ವಿಶ್ವನಾಥ್ ಅವರಿಗೆ ಹೊಸ ಇನ್ನೋವಾ ಕ್ರಿಸ್ಟಾ ಕಾರನ್ನು ನೀಡಲಾಗಿದೆ. ಕಳೆದ ತಿಂಗಳು ಜೆಡಿಎಸ್ ನ ಅನೌಪಚಾರಿಕ ಶಾಸಕಾಂಗ ಸಭೆಯಲ್ಲಿ ಕಾರು ಖರೀದಿಸುವ ಕುರಿತು ದೇವೇಗೌಡರು ಪಕ್ಷದ ಶಾಸಕರ ಬಳಿ ಹೇಳಿದ್ದರು. ಹಾಗೇ ಶಾಸಕರು ಕೈಲಾದಷ್ಟು ಆರ್ಥಿಕ ನೆರವು ನೀಡಬೇಕೆಂದು ಮನವಿ ಮಾಡಿದ್ದರು.

ಟೊಯೊಟಾ ಫಾರ್ಚುನರ್ ಕಾರನ್ನು ನೀಡಲು ದೇವೇಗೌಡರು ಇಚ್ಛಿಸಿದರಂತೆ. ಆದರೆ ಇದರ ನಿರ್ವಹಣೆ ವೆಚ್ಚ ಹೆಚ್ಚು ಎಂದು ವಿಶ್ವನಾಥ್ ಫಾರ್ಚುನರ್ಗಿಂತಲೂ ಕಡಿಮೆ ಮೌಲ್ಯದ ಟೊಯೋಟಾ ಕ್ರಿಸ್ಟಾ ಕಾರು ಸಾಕು ಎಂದಿದ್ದಾರಂತೆ. ಇಂದು ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ದೇವೇಗೌಡರು ಕಾರಿಗೆ ಪೂಜೆ ಸಲ್ಲಿಸಿದ್ದಾರೆ.

ಇಂದು ಜೆಡಿಎಸ್ ಪ್ರಧಾನ ಕಚೇರಿಗೆ ತರಲಾದ ಕಾರಿಗೆ ದೇವೇಗೌಡರು ಪೂಜೆ ಸಲ್ಲಿಸಿದ್ದಾರೆ. ವಿಶ್ವನಾಥ್ ಮಾತ್ರ ಈ ಪೂಜೆಗೆ ಬಂದಿಲ್ಲ. ಕಾರಿನ ಕೀಲಿ ಕೈಗಳನ್ನು ದೇವೇಗೌಡರು ಪಕ್ಷದ ಕಚೇರಿಯಲ್ಲಿಟ್ಟಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...