alex Certify
ಕನ್ನಡ ದುನಿಯಾ       Mobile App
       

Kannada Duniya

ಜೆ.ಡಿ.ಎಸ್. ಬಂಡಾಯ ಶಾಸಕರ ಪ್ರಕರಣ, ನಾಳೆಗೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಜೆ.ಡಿ.ಎಸ್. ಪಕ್ಷದ ಬಂಡಾಯ ಶಾಸಕರ ವಿರುದ್ಧದ ಅನರ್ಹತೆ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಜೆ.ಡಿ.ಎಸ್. ಸ್ಪೀಕರ್ ಗೆ ದೂರು ನೀಡಿದ್ದು, ಸ್ಪೀಕರ್ 2 ವರ್ಷಗಳಿಂದ ವಿಚಾರಣೆ ನಡೆಸಿ ಆದೇಶ ನೀಡದ ಕಾರಣ, ಜೆ.ಡಿ.ಎಸ್. ಹೈಕೋರ್ಟ್ ಮೊರೆ ಹೋಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಸ್ಪೀಕರ್ ಆದೇಶ ನೀಡುವ ಕುರಿತು ಅಭಿಪ್ರಾಯ ಕೇಳಿದೆ.

ಸ್ಪೀಕರ್ ವಿರುದ್ಧ ದುರುದ್ದೇಶದ ಆರೋಪ ಮಾಡಿದ್ದು, ಅದನ್ನು ತೆಗೆಯಬೇಕೆಂದು ಬಂಡಾಯ ಶಾಸಕರ ಪರ ವಕೀಲರು ಹೇಳಿದ್ದಾರೆ.

ಸ್ಪೀಕರ್ ಅವರಿಗೆ ಅಭಿಪ್ರಾಯ ತಿಳಿಸಲು ನಿರ್ದೇಶಿಸಲಾಗಿದೆ. ಮಾರ್ಚ್ 23 ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಬಂಡಾಯ ಶಾಸಕರಿಗೆ ಮತದಾನಕ್ಕೆ ಅವಕಾಶ ನೀಡುವ ಕುರಿತು ಸ್ಪೀಕರ್ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ನಾಳೆಗೆ ವಿಚಾರಣೆಯನ್ನು ಮುಂದೂಡಲಾಗಿದ್ದು, ಬಂಡಾಯ ಶಾಸಕರಿಗೆ ಮತದಾನಕ್ಕೆ ಅವಕಾಶ ಸಿಗುತ್ತಾ? ಇಲ್ಲವೇ ಅನರ್ಹರಾಗ್ತಾರಾ ಎಂಬುದು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...