alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಜೆ.ಡಿ.ಎಸ್.–ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಪ್ರಕ್ರಿಯೆಗಳು ನಡೆದಿವೆ. ಇದೇ ವೇಳೆ ಬಿ.ಜೆ.ಪಿ. ಕೂಡ ಸರ್ಕಾರ ರಚನೆಗೆ ಭಾರೀ ಕಸರತ್ತು ನಡೆಸಿದೆ.

ಪಕ್ಷದಿಂದ ಹೊರ ಹೋಗಿ ಕಾಂಗ್ರೆಸ್ ನಿಂದ ವಿಜೇತರಾದ ಶಾಸಕರನ್ನು ಸಂಪರ್ಕಿಸಲಾಗಿದೆ. ಇದರೊಂದಿಗೆ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷದ ಕೆಲವು ಶಾಸಕರನ್ನು ಸಂಪರ್ಕಿಸಿದ ಬಿ.ಜೆ.ಪಿ. ನಾಯಕರು ಬೆಂಬಲ ಕೋರಿದ್ದಾರೆ ಎನ್ನಲಾಗಿದೆ.

ಈ ನಡುವೆ ಸರ್ಕಾರ ರಚನೆಗೆ ಜೆ.ಡಿ.ಎಸ್. ಬೆಂಬಲ ಪಡೆಯಲು ಬಿ.ಜೆ.ಪಿ. ಮುಂದಾಗಿದೆ. ಜೆ.ಡಿ.ಎಸ್. ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಿ.ಜೆ.ಪಿ. ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮಾತುಕತೆ ನಡೆಸಿದ್ದಾರೆ.

ಹೋಟೆಲ್ ನಲ್ಲಿ ತಂಗಿರುವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪ್ರಕಾಶ್ ಜಾವಡೇಕರ್, ಕೆಲ ಸಮಯ ಮಾತುಕತೆ ನಡೆಸಿ ಹೊರ ಬಂದಿದ್ದಾರೆ. ಆದರೆ, ತಮ್ಮ ಭೇಟಿಯ ಕುರಿತಾಗಿ ಯಾವುದೇ ಪ್ರತಿಕ್ರಿಯೆಯನ್ನು ಅವರು ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...