alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ನಿಂದ 15 ಜೆಡಿಎಸ್ ನಿಂದ 10 ಮಂದಿ ಸಚಿವರಾಗಿ ಪ್ರಮಾಣವಚನ

ಕೊನೆಗೂ ರಾಜ್ಯ ಸಚಿವ ಸಂಪುಟ ರಚನೆಯಾಗಿದ್ದು, ಮೊದಲ ಹಂತದಲ್ಲಿ ಕಾಂಗ್ರೆಸ್ ನಿಂದ 15 ಹಾಗೂ ಜೆಡಿಎಸ್ ನಿಂದ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜಭವನದಲ್ಲಿ ಮಧ್ಯಾಹ್ನ 2.12 ಕ್ಕೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ವತಿಯಿಂದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ರಮೇಶ್ ಜಾರಕಿಹೊಳಿ, ಕೃಷ್ಣಭೈರೇಗೌಡ, ಶಿವಶಂಕರ ರೆಡ್ಡಿ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ವೆಂಕಟರಮಣಪ್ಪ, ಜಮೀರ್ ಅಹಮದ್ ಖಾನ್, ಜಯಮಾಲಾ, ರಾಜಶೇಖರ್ ಪಾಟೀಲ್, ಶಿವಾನಂದ ಪಾಟೀಲ್, ಪುಟ್ಟರಂಗ ಶೆಟ್ಟಿ ಹಾಗೂ ಪಕ್ಷೇತರ ಶಾಸಕ ಶಂಕರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇನ್ನು ಜೆಡಿಎಸ್ ನಿಂದ ಹೆಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ಎಂ.ಸಿ. ಮನಗೂಳಿ, ಡಿ.ಸಿ. ತಮ್ಮಣ್ಣ, ಜಿ.ಟಿ. ದೇವೇಗೌಡ, ಎಸ್.ಆರ್. ಶ್ರೀನಿವಾಸ್, ವೆಂಕಟರಾವ್ ನಾಡಗೌಡ, ಸಿ.ಎಸ್. ಪುಟ್ಟರಾಜು, ಸಾರಾ ಮಹೇಶ್ ಹಾಗೂ ಬಹುಜನ ಸಮಾಜ ಪಾರ್ಟಿಯ ಎನ್. ಮಹೇಶ್ ಮಂತ್ರಿಗಳಾಗಿದ್ದಾರೆ. ಸಚಿವರಾಗಿ ಮೊದಲಿಗೆ ಜೆಡಿಎಸ್ ನ ಹೆಚ್.ಡಿ. ರೇವಣ್ಣ ಪ್ರಮಾಣವಚನ ಸ್ವೀಕರಿಸಿದರೆ ಕೊನೆಯಲ್ಲಿ ವಿಧಾನಪರಿಷತ್ ಸದಸ್ಯೆ ಜಯಮಾಲಾ ಪ್ರಮಾಣವಚನ ಸ್ವೀಕರಿಸಿದರು.

ಕಾಂಗ್ರೆಸ್ ತನಗೆ ಸಿಕ್ಕ 22 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ಮಾತ್ರ ಮಂತ್ರಿಗಳನ್ನಾಗಿ ಮಾಡಿದ್ದು, ಉಳಿದ ಸ್ಥಾನಗಳನ್ನು ಉಳಿಸಿಕೊಂಡಿದೆ. ಜೆಡಿಎಸ್ ತನ್ನ ಪಾಲಿನ 12 ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಮಂತ್ರಿಗಳನ್ನು ನೇಮಿಸಿ ಉಳಿದ  ಸ್ಥಾನವನ್ನು ಉಳಿಸಿಕೊಂಡಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸಚಿವರ ಬೆಂಬಲಿಗರು ಆಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದು, ತಮ್ಮ ತಮ್ಮ ನಾಯಕರ ಪರ ಜಯಘೋಷ ಕೂಗಿದರು.  ನೂತನ ಸಚಿವರು, ಕ್ಷೇತ್ರದ ವಿವರ ಇಂತಿದೆ.

ಹೆಚ್.ಡಿ. ರೇವಣ್ಣ-ಜೆಡಿಎಸ್- ಹೊಳೆನರಸೀಪುರ ಕ್ಷೇತ್ರ

ಆರ್.ವಿ. ದೇಶಪಾಂಡೆ-ಕಾಂಗ್ರೆಸ್- ಹಳಿಯಾಳ ಕ್ಷೇತ್ರ

ಬಂಡೆಪ್ಪ ಕಾಶೆಂಪುರ-ಜೆಡಿಎಸ್- ಬೀದರ್ ದಕ್ಷಿಣ ಕ್ಷೇತ್ರ

ಡಿ.ಕೆ. ಶಿವಕುಮಾರ್-ಕಾಂಗ್ರೆಸ್-ಕನಕಪುರ ಕ್ಷೇತ್ರ

ಜಿ.ಟಿ. ದೇವೇಗೌಡ-ಜೆಡಿಎಸ್-ಚಾಮುಂಡೇಶ್ವರಿ ಕ್ಷೇತ್ರ

ಕೆ.ಜೆ. ಜಾರ್ಜ್-ಕಾಂಗ್ರೆಸ್-ಸರ್ವಜ್ಞ ನಗರ ಕ್ಷೇತ್ರ

ಡಿ.ಸಿ. ತಮ್ಮಣ್ಣ-ಜೆಡಿಎಸ್-ಮದ್ದೂರು ಕ್ಷೇತ್ರ

ಕೃಷ್ಣ ಬೈರೇಗೌಡ-ಕಾಂಗ್ರೆಸ್-ಬ್ಯಾಟರಾಯನಪುರ ಕ್ಷೇತ್ರ

ಎಂ.ಸಿ. ಮನಗೂಳಿ-ಜೆಡಿಎಸ್,ಸಿಂದಗಿ ಕ್ಷೇತ್ರ

ಶಿವಶಂಕರ ರೆಡ್ಡಿ-ಕಾಂಗ್ರೆಸ್-ಗೌರಿಬಿದನೂರು ಕ್ಷೇತ್ರ

ಎಸ್.ಆರ್. ಶ್ರೀನಿವಾಸ್-ಜೆಡಿಎಸ್-ಗುಬ್ಬಿ ವಿಧಾನಸಭಾ ಕ್ಷೇತ್ರ

ರಮೇಶ್ ಜಾರಕಿಹೊಳಿ-ಕಾಂಗ್ರೆಸ್-ಗೋಕಾಕ್ ಕ್ಷೇತ್ರ

ವೆಂಕಟರಾವ್ ನಾಡಗೌಡ-ಜೆಡಿಎಸ್-ಸಿಂಧನೂರು ಕ್ಷೇತ್ರ

ಪ್ರಿಯಾಂಕ್ ಖರ್ಗೆ-ಕಾಂಗ್ರೆಸ್-ಚಿತ್ತಾಪುರ ಕ್ಷೇತ್ರ

ಸಿ.ಎಸ್. ಪುಟ್ಟರಾಜು-ಜೆಡಿಎಸ್-ಮೇಲುಕೋಟೆ ಕ್ಷೇತ್ರ

ಯು.ಟಿ. ಖಾದರ್-ಕಾಂಗ್ರೆಸ್-ಮಂಗಳೂರು ಕ್ಷೇತ್ರ

ಸಾರಾ ಮಹೇಶ್-ಜೆಡಿಎಸ್-ಕೆ.ಆರ್. ನಗರ ಕ್ಷೇತ್ರ

ಜಮೀರ್ ಆಹ್ಮದ್ ಖಾನ್-ಕಾಂಗ್ರೆಸ್-ಚಾಮರಾಜ ಪೇಟೆ ಕ್ಷೇತ್ರ

ಎನ್. ಮಹೇಶ್-ಬಹುಜನ ಸಮಾಜವಾದಿ ಪಾರ್ಟಿ-ಕೊಳ್ಳೇಗಾಲ

ಶಿವಾನಂದ ಪಾಟೀಲ್-ಕಾಂಗ್ರೆಸ್-ಬಸವನ ಬಾಗೇವಾಡಿ ಕ್ಷೇತ್ರ

ವೆಂಕಟರಮಣಪ್ಪ-ಕಾಂಗ್ರೆಸ್-ಪಾವಗಡ

ರಾಜಶೇಖರ ಪಾಟೀಲ್-ಕಾಂಗ್ರೆಸ್-ಹುಮನಾಬಾದ್ ಕ್ಷೇತ್ರ

ಸಿ. ಪುಟ್ಟರಂಗ ಶೆಟ್ಟಿ-ಕಾಂಗ್ರೆಸ್-ಚಾಮರಾಜ ನಗರ ಕ್ಷೇತ್ರ

ಜಯಮಾಲಾ-ಕಾಂಗ್ರೆಸ್-ವಿಧಾನ ಪರಿಷತ್ ಸದಸ್ಯೆ

ಶಂಕರ್-ಪಕ್ಷೇತರ-ರಾಣೆಬೆನ್ನೂರು ಕ್ಷೇತ್ರ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...