alex Certify
ಕನ್ನಡ ದುನಿಯಾ       Mobile App
       

Kannada Duniya

ಖಾತೆ ಹಂಚಿಕೆ ಹಗ್ಗಜಗ್ಗಾಟದಲ್ಲಿ ಕೊನೆಗೂ ಜೆಡಿಎಸ್ ಗೆ ಗೆಲುವು

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಜೆಡಿಎಸ್ ನ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹಾಗೂ ಕಾಂಗ್ರೆಸ್ ನ ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇವರಿಬ್ಬರು ಪ್ರಮಾಣವಚನ ಸ್ವೀಕರಿಸಿ ವಾರ ಕಳೆಯುತ್ತಾ ಬಂದಿದ್ದರೂ ಖಾತೆ ಹಂಚಿಕೆ ಬಿಕ್ಕಟ್ಟಿನ ಕಾರಣಕ್ಕಾಗಿ ಸಚಿವ ಸಂಪುಟ ರಚನೆ ವಿಳಂಬವಾಗಿತ್ತು. ಹಣಕಾಸು ಖಾತೆಗೆ ಕಾಂಗ್ರೆಸ್ ಪಟ್ಟುಹಿಡಿದಿದ್ದು, ಆದರೆ ವಾಡಿಕೆಯಂತೆ ಈವರೆಗೂ ಹಣಕಾಸು ಖಾತೆ ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ಬಿಟ್ಟುಕೊಡಲಾಗುವುದಿಲ್ಲವೆಂದು ಜೆಡಿಎಸ್ ಹೇಳಿತ್ತು.

ಹೀಗಾಗಿ ಇದುವರೆಗೂ ಮುಂದುವರೆದುಕೊಂಡು ಬಂದಿದ್ದ ಖಾತೆ ಹಂಚಿಕೆಯ ಹಗ್ಗಜಗ್ಗಾಟ ಕೊನೆಗೂ ಬಗೆಹರಿದಿದ್ದು, ಕಾಂಗ್ರೆಸ್, ಹಣಕಾಸು ಖಾತೆಯನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಜೊತೆಗೆ ಲೋಕೋಪಯೋಗಿ, ಸಹಕಾರ ಹಾಗೂ ಕಂದಾಯ ಇಲಾಖೆಯೂ ಜೆಡಿಎಸ್ ಪಾಲಾಗಿದೆ.

ಕಾಂಗ್ರೆಸ್ ಗೆ ಉಪ ಮುಖ್ಯಮಂತ್ರಿ ಹುದ್ದೆ ಜೊತೆಗೆ ಗೃಹ, ಐಟಿ-ಬಿಟಿ, ಇಂಧನ ಸೇರಿದಂತೆ ಇತರೆ ಖಾತೆಗಳು ಲಭ್ಯವಾಗಿವೆ ಎನ್ನಲಾಗಿದ್ದು, ಸಂಪುಟ ರಚನೆ ಬಿಕ್ಕಟ್ಟು ಈಗ ಬಗೆಹರಿದಿರುವ ಕಾರಣ ಬಹುತೇಕ ಜೂನ್ ಎರಡರ ಶನಿವಾರದಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...