alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸಿಎಂ ಗಮನಕ್ಕೂ ತಾರದೇ ತುಮಕೂರಿನಲ್ಲಿ ಸಚಿವ ರೇವಣ್ಣ ಸಭೆ…?

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಸಹೋದರ ಎಚ್.ಡಿ. ರೇವಣ್ಣ ಸೂಪರ್ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರೂ ಸಹ ಈ ಹಿಂದೆ ಇದೇ ಆರೋಪ ಮಾಡಿದ್ದರ ಮಧ್ಯೆ, ಸಚಿವ ಎಚ್.ಡಿ. ರೇವಣ್ಣ, ಉಪ ಮುಖ್ಯಮಂತ್ರಿ ಕಾಂಗ್ರೆಸ್ ನ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಅವರ ಗಮನಕ್ಕೂ ಬಾರದಂತೆ ಸಭೆ ನಡೆಸಿದ್ದಾರೆಂಬ ಮಾತುಗಳು ಈಗ ಕೇಳಿ ಬರುತ್ತಿವೆ.

ತುಮಕೂರಲ್ಲಿ ಸಭೆ ನಡೆಸಿದ ಎಚ್.ಡಿ. ರೇವಣ್ಣ ಇದೇ ವೇಳೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ದೂರವಾಣಿ ಕರೆ ಮಾಡಿದ್ದರೆನ್ನಲಾಗಿದ್ದು, ಮಾತುಕತೆ ಸಂದರ್ಭದಲ್ಲಿ ಸಭೆ ಕುರಿತು ಹಲವು ಬಾರಿ ನಿಮಗೆ ಕರೆ ಮಾಡಿದ್ದರು ಸ್ವೀಕರಿಸಿಲ್ಲವೆಂದು ಹೇಳಿದ್ದರು.

ಇದಕ್ಕೆ ಈಗ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ತಮಗೆ ಎಚ್.ಡಿ. ರೇವಣ್ಣ ಅವರಿಂದ ಸಭೆ ಕುರಿತು ಯಾವುದೇ ಕರೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ರೇವಣ್ಣ ಸುಳ್ಳು ಹೇಳಿದ್ರಾ ಎಂಬ ಪ್ರಶ್ನೆ ಈಗ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...