alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಸಿಬಿಯಲ್ಲಿ ಬಂತು ಮದುವೆ ದಿಬ್ಬಣ…!

ಜೀವನದ ಮಹತ್ವದ ಘಟ್ಟವಾಗಿರುವ ವಿವಾಹವನ್ನು ಸ್ಮರಣೀಯವಾಗಿಸಿಕೊಳ್ಳಲು ಹಲವರು ವಿಭಿನ್ನ ರೀತಿಯಲ್ಲಿ ವಿವಾಹವಾಗುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಮದುವೆ ಬಳಿಕ ನವವಧುವಿನೊಂದಿಗೆ ಕಲ್ಯಾಣ ಮಂಟಪದಿಂದ ಮನೆವರೆಗೂ ಜೆಸಿಬಿಯಲ್ಲಿ ತೆರಳಿ ಗಮನ ಸೆಳೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಲ್ಲಕಟ್ಟ ನಿವಾಸಿ ಚೇತನ್ ವೃತ್ತಿಯಲ್ಲಿ ಜೆಸಿಬಿ ಆಪರೇಟರ್. ಇವರ ವಿವಾಹ ಮಮತಾ ಅವರ ಜೊತೆ ಸಂಟ್ಯಾರ್ ಸಮೀಪದ ಪರ್ಪುಂಜ ಶಿವ ಕೃಪಾ ಸಭಾಭವನದಲ್ಲಿ ನೆರವೇರಿತ್ತು.

ತಮಗೆ ಬದುಕು ನೀಡುತ್ತಿರುವ ಜೆಸಿಬಿ ಕುರಿತು ಅಭಿಮಾನ ಹೊಂದಿದ್ದ ಚೇತನ್, ಕಲ್ಯಾಣ ಮಂಟಪದ ಬಳಿ ಅದನ್ನು ತರಿಸಿಕೊಂಡಿದ್ದು, ವಿವಾಹ ಸಮಾರಂಭದ ಬಳಿಕ ಪತ್ನಿಯನ್ನು ಕೂರಿಸಿಕೊಂಡು ಸ್ವತಃ ತಾವೇ ಜೆಸಿಬಿ ಚಲಾಯಿಸಿಕೊಂಡು ಸ್ವಲ್ಪ ದೂರ ತೆರಳಿದ್ದಾರೆ. ನಂತರ ತಮ್ಮ ಸ್ನೇಹಿತನಿಗೆ ಜೆಸಿಬಿ ಚಾಲನೆ ಮಾಡಲು ನೀಡಿದ ಚೇತನ್, ಪತ್ನಿಯೊಂದಿಗೆ ಜೆಸಿಬಿ ಬಕೆಟ್ ನಲ್ಲಿ ಕುಳಿತು ಮನೆಗೆ ಪ್ರಯಾಣ ಬೆಳೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...