alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ 15,345 ಮತಗಳ ಮುನ್ನಡೆ

ಸೋಮವಾರದಂದು ನಡೆದಿದ್ದ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪ್ರಹ್ಲಾದ್ ಬಾಬು ಅವರಿಗಿಂತ 15,345 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಮತ ಎಣಿಕೆ ಆರಂಭದಿಂದಲೂ ಸೌಮ್ಯಾ ರೆಡ್ಡಿಯವರು ಮುನ್ನಡೆ ಕಾಯ್ದುಕೊಂಡು ಬರುತ್ತಿದ್ದು, 9ನೇ ಸುತ್ತಿನಲ್ಲೂ ಮುನ್ನಡೆಯ ಅಂತರ ಹೆಚ್ಚಾಗಿದೆ. ಸೌಮ್ಯ ರೆಡ್ಡಿ ಅವರಿಗೆ 37,288 ಮತಗಳು ಲಭಿಸಿದ್ದರೆ ಪ್ರಹ್ಲಾದ್ ಬಾಬು ಅವರಿಗೆ 21,943 ಮತಗಳು ಲಭಿಸಿವೆ.

ಬಹು ನಿರೀಕ್ಷೆ ಹುಟ್ಟಿಸಿದ್ದ ಪಕ್ಷೇತರ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಕೇವಲ 809 ಮತಗಳನ್ನು ಮಾತ್ರ ಪಡೆದುಕೊಂಡಿದ್ದು, ಮತ ಎಣಿಕೆ ಕಾರ್ಯ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...