alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕದಲ್ಲಿ ಜಯಾ ಸಮಾಧಿ ನಿರ್ಮಿಸಲು ಮನವಿ

jaya-6-t-2

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ಕರ್ನಾಟಕದ ಮನೆ ಮಗಳಾಗಿದ್ದು, ಅವರ ಸಮಾಧಿಯನ್ನು ಇಲ್ಲಿಯೇ ನಿರ್ಮಿಸಬೇಕೆಂದು ಜೆ.ಡಿ.ಎಸ್. ಪಕ್ಷದ ಸಂಸದರು ಮನವಿ ಮಾಡಿದ್ದಾರೆ.

ಜೆ.ಡಿ.ಎಸ್. ಪಕ್ಷದ ಲೋಕಸಭೆ ಸದಸ್ಯ ಪುಟ್ಟರಾಜು, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಅವರು ತಮಿಳುನಾಡು ಸರ್ಕಾರಕ್ಕೆ ಈ ಕುರಿತು ಮನವಿ ಮಾಡಿದ್ದು, ಜಯಲಲಿತಾ ಅವರು ಕರ್ನಾಟಕದಲ್ಲಿ ಜನಿಸಿದ್ದಾರೆ. ಅವರಿಂದ ರಾಜ್ಯಕ್ಕೆ ಎಷ್ಟೇ ತೊಂದರೆಯಾಗಿದ್ದರೂ, ಮನೆಮಗಳಾದ ಅವರ ಸಮಾಧಿಯನ್ನು ಇಲ್ಲಿಯೇ ನಿರ್ಮಿಸಬೇಕು. ಇದಕ್ಕಾಗಿ 1 ಎಕರೆ ಜಾಗ ಕೊಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಜಯಲಲಿತಾ ಅವರ ತವರು ಮನೆ ಕರ್ನಾಟಕ. ಇಲ್ಲಿಯೇ ಸಮಾಧಿ ನಿರ್ಮಿಸಬೇಕು ಎಂದು ಇಬ್ಬರೂ ನಾಯಕರು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...