alex Certify
ಕನ್ನಡ ದುನಿಯಾ       Mobile App
       

Kannada Duniya

ವೀರ ಯೋಧನ ಮಡದಿಯ ಮನದಾಳದ ಮಾತು

Lance_Naik_Hanamanthappa

ಸಿಯಾಚಿನ್ ಹಿಮಪಾತಕ್ಕೆ ಸಿಲುಕಿ, 6 ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ, ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಅವರ ಸ್ವಗ್ರಾಮ ಬೆಟದೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಅಪಾರ ಸಂಖ್ಯೆಯ ಜನ, ಗಣ್ಯರು, ಸೈನಿಕರು, ಸಂಬಂಧಿಕರು ಅಂತಿಮ ದರ್ಶನ ಪಡೆದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ಹನುಮಂತಪ್ಪ ಅವರ ಅಂತ್ಯಸಂಸ್ಕಾರ ನೆರವೇರಿತು. ಅಗಲಿದ ಚೇತನಕ್ಕೆ ಅಲ್ಲಿದ್ದವರೆಲ್ಲಾ ಕಂಬನಿ ಮಿಡಿದರು. ಅವರ ಪತ್ನಿ ಜಯಮ್ಮ ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹನುಮಂತಪ್ಪ ಅವರು ಸೇನೆಯಲ್ಲಿ ಇರುವುದು ಗೊತ್ತಿದ್ದೇ ನಾನು ಅವರನ್ನು ಮದುವೆಯಾಗಿದ್ದೇನೆ. ಅವರ ಜೊತೆಗೆ 4 ವರ್ಷ ಸಂಸಾರ ನಡೆಸಿದ್ದೇನೆ. ಅವರು ಊರಿಗೆ ಬಂದಾಗ ಅಲ್ಲಿನ ಚಿತ್ರಣದ ಬಗ್ಗೆ ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.

ನಾನು ನನ್ನ ಮಗಳನ್ನು ಚೆನ್ನಾಗಿ ಓದಿಸಿ ಸೈನ್ಯಕ್ಕೆ ಸೇರಿಸುತ್ತೇನೆ. ನಾನು ಧೈರ್ಯದಿಂದ ಇರುತ್ತೇನೆ. ಅವರು ಇಲ್ಲದಿದ್ದರೂ ಬದುಕುವ ಪಾಠವನ್ನು ನನಗೆ ಕಲಿಸಿದ್ದಾರೆ. ಅವರು ಸೈನ್ಯದಲ್ಲಿ ಇದ್ದ ಕಾರಣ, ಇಂತಹ ಪರಿಸ್ಥಿತಿ ಬಂದರೂ ಬರಬಹುದೆಂದು ಮೊದಲೇ ಹೇಳಿದ್ದರು. ಫೆಬ್ರವರಿ 2ರಂದು ಅವರೊಂದಿಗೆ ಮಾತನಾಡಿದ್ದೆ ಎಂದು ಜಯಮ್ಮ ಹೇಳುತ್ತಲೇ ಬಿಕ್ಕಿ ಬಿಕ್ಕಿ ಅತ್ತರು. ಅಲ್ಲಿದ್ದವರ ಕಣ್ಣಾಲಿಗಳೆಲ್ಲಾ ಒದ್ದೆಯಾದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...