alex Certify
ಕನ್ನಡ ದುನಿಯಾ       Mobile App
       

Kannada Duniya

ಜನತಾದರ್ಶನದಲ್ಲಿ ದುಗುಡ ತೋಡಿಕೊಂಡ ಮಹಿಳೆಗೆ ನಾಲ್ಕೇ ದಿನದಲ್ಲಿ ನ್ಯಾಯ ಒದಗಿಸಿದ ಸಿಎಂ

ಬೆಂಗಳೂರು: ಸಾಲ ಕೊಟ್ಟ ವ್ಯಕ್ತಿಯಿಂದ ಸಂಕಷ್ಟಕ್ಕೀಡಾಗಿ, ಮನೆ ಕಳೆದುಕೊಂಡು ನಿರಾಶ್ರಿತಳಾಗಿದ್ದ ಮಹಿಳೆಯೊಬ್ಬರು, ಜನತಾದರ್ಶನಕ್ಕೆ ಬಂದು ತಮ್ಮ ಸಂಕಷ್ಟ ಹೇಳಿಕೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೇವಲ ನಾಲ್ಕೇ ದಿನಗಳಲ್ಲಿ ಮಹಿಳೆಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ.

ಬೆಂಗಳೂರಿನ ಗಿರಿನಗರದ ಕನ್ನಿಯಮ್ಮ ಎಂಬ ಮಹಿಳೆ, ಪತಿ ಮಾಡಿದ ಕೈಸಾಲವನ್ನು ಕಷ್ಟಪಟ್ಟು ತೀರಿಸುತ್ತಿದ್ದರೂ ಸಾಲಕೊಟ್ಟ ವ್ಯಕ್ತಿ ಆಕೆ ಊರಲಿಲ್ಲದ ಸಂದರ್ಭ ನೋಡಿಕೊಂಡು ಮನೆಯ ಬೀಗ ಒಡೆದು ಮನೆಯನ್ನ ಸ್ವಾಧೀನಪಡಿಸಿಕೊಂಡು ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು. ಇದರಿಂದ ಬೀದಿಪಾಲದ ಮಹಿಳೆ ಸೆ.1 ರಂದು ಸಿಎಂ ಜನತಾದರ್ಶನಕ್ಕೆ ಬಂದು ತನ್ನ ಸಂಕಷ್ಟ ತೋಡಿಕೊಂಡಿದ್ದರು.

ತಕ್ಷಣ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ, ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಕರೆ ಮಾಡಿ ಮಹಿಳೆಗೆ ರಕ್ಷಣೆ ನೀಡುವಂತೆ ಹಾಗೂ ವಶಪಡಿಸಿಕೊಂಡ ವ್ಯಕ್ತಿಯಿಂದ ಮನೆ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಸಿಎಂ ಸೂಚನೆ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಕನ್ನಿಯಮ್ಮನಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಈಗ ಕನ್ನಿಯಮ್ಮ ವಾಪಸ್ ಮನೆ ಪಡೆದುಕೊಂಡಿದ್ದು, ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ನಾಡಿನ ದೊರೆ ಮಾಡಿದ ಉಪಕಾರಕ್ಕೆ ಕನ್ನಿಯಮ್ಮ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...