alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀರಾಮುಲು ಬಂಗಲೆ ಉದ್ಘಾಟಿಸಿದ ಜನಾರ್ಧನ ರೆಡ್ಡಿ

janardhan_reddy_sriramulu

ಬಳ್ಳಾರಿ: ಸಂಸತ್ ಸದಸ್ಯ ಬಿ. ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ನಿರ್ಮಿಸಿರುವ, ಐಷಾರಾಮಿ ಬಂಗಲೆಯನ್ನು ಮಾಜಿ ಸಚಿವ ಜನಾರ್ಧನ ರೆಡ್ಡಿ ಉದ್ಘಾಟಿಸಿದ್ದಾರೆ.

‘ಅರುಣಾ ಗಾರ್ಡನ್’ ಹೆಸರಿನ ಈ ಮನೆಯನ್ನು ಆತ್ಮೀಯ ಸ್ನೇಹಿತನಿಂದಲೇ ಶ್ರೀರಾಮುಲು ಅವರು ಉದ್ಘಾಟಿಸಲು ಕಾದಿದ್ದರು. 5 ವರ್ಷಗಳ ಬಳಿಕ ಬಳ್ಳಾರಿಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಆಗಮಿಸಿದ್ದು, ಇದೇ ಸಂದರ್ಭದಲ್ಲಿ ಶ್ರೀರಾಮುಲು ಮನೆಯ ಗೃಹಪ್ರವೇಶವನ್ನು ನೆರವೇರಿಸಲಾಗಿದೆ. ಮನೆಯ ಗೃಹಪ್ರವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಮನೆ ನಿರ್ಮಿಸಬೇಕೆಂಬುದು ನನ್ನ ಕನಸಾಗಿತ್ತು. ಅನೇಕ ವರ್ಷಗಳಿಂದ ಕಾಮಗಾರಿ ನಡೆದಿದ್ದರೂ ಅದನ್ನು ಪೂರ್ಣಗೊಳಿಸಲು ಆಗಿರಲಿಲ್ಲ. ಈಗ ಜನಾರ್ಧನ ರೆಡ್ಡಿ ಅವರಿಂದಲೇ ಉದ್ಘಾಟನೆ ಮಾಡಿಸಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಜನಾರ್ಧನ ರೆಡ್ಡಿ ಮಾತನಾಡಿ, ಶ್ರೀರಾಮುಲು ಆತ್ಮೀಯ ಗೆಳೆಯರಾಗಿದ್ದು, ಅವರ ಕನಸಿನ ಮನೆ ನಿರ್ಮಾಣವಾಗಿದೆ ಎಂದಿದ್ದಾರೆ. 3 ಅಂತಸ್ತಿನ ಈ ಐಷಾರಾಮಿ ಬಂಗಲೆ ಒಂದು ಮುಕ್ಕಾಲು ಎಕರೆಯಲ್ಲಿ ನಿರ್ಮಾಣವಾಗಿದ್ದು, ಮುಂಬೈನ ಇಂಜಿನಿಯರ್ ಗಳು ನಿರ್ಮಾಣ ಮಾಡಿದ್ದಾರೆ. 6 ಬೆಡ್ ರೂಂ, ಸ್ವಿಮ್ಮಿಂಗ್ ಫೂಲ್ ಸೇರಿದಂತೆ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಇದಕ್ಕೆ ಆತ್ಮೀಯ ಸ್ನೇಹಿತರಾದ ಜನಾರ್ಧನ ರೆಡ್ಡಿ ಅವರ ಪತ್ನಿಯ ಹೆಸರನ್ನು ಇಡಲಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ಧನ ರೆಡ್ಡಿ ಬರೋಬ್ಬರಿ 5 ವರ್ಷಗಳ ನಂತರ ನಿನ್ನೆ ಬಳ್ಳಾರಿಗೆ ಆಗಮಿಸಿದ್ದಾರೆ. ಮಗಳ ಮದುವೆ ಹಿನ್ನಲೆಯಲ್ಲಿ ಬಳ್ಳಾರಿಗೆ ತೆರಳಲು ಅವರಿಗೆ ನ್ಯಾಯಾಲಯ ಅನುಮತಿ ನೀಡಿದ್ದು, ಅವರ ಅಭಿಮಾನಿಗಳು, ಬೆಂಬಲಿಗರು ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀರಾಮುಲು ಅವರ ಬಂಗಲೆಯ ಗೃಹ ಪ್ರವೇಶ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...