alex Certify
ಕನ್ನಡ ದುನಿಯಾ       Mobile App
       

Kannada Duniya

ಜನಾರ್ಧನ ರೆಡ್ಡಿ ಮಗಳ ಮದುವೆಗೆ ಅದ್ಧೂರಿ ಸೆಟ್

reddy

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ವೆಚ್ಛದಲ್ಲಿ ಸೆಟ್ ಹಾಕಲಾಗಿದೆ. ಮದುವೆ ಮಂಟಪವಾಗಿ ಹಂಪೆಯ ವಿಜಯ ವಿಠ್ಠಲ ದೇವಾಲಯ ಮಾದರಿಯನ್ನು ನಿರ್ಮಿಸಲಾಗಿದೆ.

ದುಬಾರಿ ಬೆಲೆಯ ಆಕರ್ಷಕ ಆಮಂತ್ರಣ ಪತ್ರಿಕೆಯನ್ನು ಮಾಡಿಸಿದ್ದ ಜನಾರ್ಧನ ರೆಡ್ಡಿ, ಮದುವೆಯನ್ನೂ ಕೂಡ ಭಾರೀ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 36 ಎಕರೆಯಲ್ಲಿ ಒಂದು ಹಳ್ಳಿಯನ್ನೇ ನಿರ್ಮಾಣ ಮಾಡಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಛದಲ್ಲಿ ದೇವಾಲಯದ ಮಾದರಿಯನ್ನು ನಿರ್ಮಿಸಲಾಗಿದ್ದು, ಈ ಮಂಟಪದಲ್ಲಿ ಮದುವೆ ಕಾರ್ಯಗಳು ನಡೆಯಲಿವೆ.

ಇದಕ್ಕೆ ಸ್ವಲ್ಪ ದೂರದಲ್ಲಿ ಎರಡು ಐಷಾರಾಮಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ವಧು ಮತ್ತು ವರರಿಗೆ ಮತ್ತು ಅವರ ಕುಟುಂಬದವರಿಗೆ ಈ ಮನೆಗಳು ಮೀಸಲು. ಇನ್ನೂ ಮಂಟಪದಿಂದ ಈ ಮನೆಯವರೆಗಿನ ದಾರಿಯಲ್ಲಿ ಹಳ್ಳಿಯ ಮಾದರಿ ಇದೆ. ಪುಷ್ಪವನ, ಬಂಡಿಗಳು, ಕೆತ್ತನೆಯ ಕಂಬಗಳು, ಗುಡಿಸಲು, ಹಳ್ಳಿಕಟ್ಟೆ ಸೆಟ್ ಗಳು ಕಣ್ಣು ಕುಕ್ಕುವಂತಿವೆ.

ನವೆಂಬರ್ 16 ರಂದು ಮದುವೆ ನಡೆಯಲಿದ್ದು, ಆಗಮಿಸುವ ಅತಿಥಿಗಳು, ಗಣ್ಯರ ಸ್ವಾಗತಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ವಿಶೇಷ ಭೋಜನ ಸಿದ್ದಪಡಿಸಲು ಬಾಣಸಿಗರು, ಮದುವೆ ಕಾರ್ಯಕ್ಕೆ ಪುರೋಹಿತರು ಆಗಮಿಸಲಿದ್ದಾರೆ.

ಖ್ಯಾತ ಕಲಾವಿದ ಶಶಿಧರ್ ಅಡಪ ಅವರ ತಂಡದಿಂದ ನಿರ್ಮಾಣ ಮಾಡಲಾಗಿರುವ ಸೆಟ್ ನಲ್ಲಿ ವಿವಾಹವೂ ಅದ್ಧೂರಿಯಾಗಿ ನಡೆಯಲಿದ್ದು, ವೈಭವದ ಮದುವೆಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ನೂರಾರು ಕೋಟಿ ರೂಪಾಯಿ ವೆಚ್ಛದಲ್ಲಿ ನಡೆಯಲಿರುವ ವೈಭವದ ಮದುವೆಗೆ ಬಳ್ಳಾರಿಯಿಂದ ವಿಶೇಷ ರೈಲುಗಳು ಕೂಡ ಸಂಚರಿಸಲಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...