alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ಡಿ ಮಗಳ ಮದುವೆಯಲ್ಲಿ ಇಂದ್ರಲೋಕವೇ ಧರೆಗಿಳಿದಂತಿದೆ

reddy-jana

ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಮಗಳ ಮದುವೆಗೆ ಇಂದ್ರಲೋಕವೇ ಧರೆಗಿಳಿದಂತಿದೆ.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬ್ರಹ್ಮಿಣಿ ಹಾಗೂ ರಾಜೀವ್ ರೆಡ್ಡಿ ಅವರ ಮದುವೆ ಶ್ರೀನಿವಾಸ ಕಲ್ಯಾಣದೊಂದಿಗೆ ಆರಂಭವಾಗಿದೆ. ಬೆಳಿಗ್ಗೆ 5.45 ರಿಂದಲೇ ಪೂಜಾ ಕಾರ್ಯಗಳು ನಡೆದಿದ್ದು, ತಿರುಪತಿ ಮಾದರಿಯ ಸಪ್ತ ಬಾಗಿನಲಿನ ಕಲ್ಯಾಣ ಮಂಟಪದಲ್ಲಿ ಮಾಂಗಲ್ಯಧಾರಣೆ ನಡೆಯಲಿದೆ. ತಿರುಪತಿ ದೇವಾಲಯದ ಅರ್ಚಕರ ನೇತೃತ್ವದಲ್ಲಿ ಮದುವೆಯ ಕಾರ್ಯಗಳು ಸಾಂಗವಾಗಿ ಸಾಗಿವೆ.

ಬೆಳಿಗ್ಗೆಯಿಂದಲೇ ಭೋಜನ ಆರಂಭವಾಗಲಿದ್ದು, ಸುಮಾರು 60 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾರತ, ದಕ್ಷಿಣ ಭಾರತ, ಉತ್ತರ ಕರ್ನಾಟಕ ಶೈಲಿಯ ಅಡುಗೆ ಸಿದ್ಧವಾಗಿದೆ. ಗಣ್ಯರು, ಅತಿಥಿಗಳು, ಬಂಧು- ಬಾಂಧವರ ಸಮ್ಮುಖದಲ್ಲಿ ವಿವಾಹ ಮಹೋತ್ಸವ ನಡೆದಿದ್ದು, ಮಧ್ಯಾಹ್ನದ ನಂತರ 2 ವಿಶೇಷ ವಿಮಾನಗಳಲ್ಲಿ ವಧು, ವರರ ಕುಟುಂಬದವರು ಬಳ್ಳಾರಿಗೆ ತೆರಳಲಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅದ್ಧೂರಿ ವಿವಾಹ ಮಹೋತ್ಸವ ಇಂದ್ರನ ಲೋಕವನ್ನು ನೆನಪಿಸುವಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...