alex Certify
ಕನ್ನಡ ದುನಿಯಾ       Mobile App
       

Kannada Duniya

ಉಡಿ ತುಂಬುವಾಗ ಕಣ್ಣೀರಿಟ್ಟ ಜನಾರ್ಧನ ರೆಡ್ಡಿ ದಂಪತಿ

reddy

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಹಾಗೂ ರಾಜೀವ್ ರೆಡ್ಡಿ ಅವರ ರಿಸೆಪ್ಷನ್ ಹೈದರಾಬಾದ್ ನ ಪೋರ್ಟ್ ಗ್ರ್ಯಾಂಡ್ ಪ್ಯಾಲೇಸ್ ನಲ್ಲಿ ನಾಳೆ ಅದ್ಧೂರಿಯಾಗಿ ನಡೆಯಲಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಮುಗಿದ ಬಳಿಕ, ಬಳ್ಳಾರಿಗೆ ಬಂದಿದ್ದ ರೆಡ್ಡಿ ಕುಟುಂಬದವರು ಶನಿವಾರ ಪುತ್ರಿಗೆ ಉಡಿ ತುಂಬಿದ್ದಾರೆ. ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ, ಜನಾರ್ಧನ ರೆಡ್ಡಿ ದಂಪತಿ ಕಣ್ಣೀರಿಟ್ಟಿದ್ದಾರೆ. ಸಂಜೆ, ಹೊಸಪೇಟೆ ಜಿಂದಾಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಕುಟುಂಬದವರೆಲ್ಲಾ ಹೈದರಾಬಾದ್ ಗೆ ತೆರಳಿದ್ದಾರೆ. ಮಗಳ ಮದುವೆ ಹಿನ್ನಲೆಯಲ್ಲಿ ಕೋರ್ಟ್ ಅನುಮತಿ ಪಡೆದು ಬಳ್ಳಾರಿಗೆ ಬಂದಿದ್ದ ರೆಡ್ಡಿ ಕೂಡ ಹೈದರಾಬಾದ್ ಗೆ ತೆರಳಿದ್ದಾರೆ.

ಅವರೆಲ್ಲರನ್ನು ಹೈದರಾಬಾದ್ ಗೆ ಕಳುಹಿಸಿಕೊಟ್ಟ ಸಂಸದ ಶ್ರೀರಾಮುಲು, ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಗಂಡನ ಮನೆಗೆ ಕಳುಹಿಸುವಾಗ ತಂದೆ, ತಾಯಿ ಅಳುವುದು ಸಹಜ. ಅದೇ ರೀತಿ ಜನಾರ್ಧನ ರೆಡ್ಡಿ ಮಗಳನ್ನು ಕಳುಹಿಸುವಾಗ ಅತ್ತಿದ್ದಾರೆ. ಎಲ್ಲರೂ ಹೈದರಾಬಾದ್ ಗೆ ತೆರಳಿದ್ದಾರೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...