alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಅದ್ಧೂರಿ ಮದುವೆ ಮಾಡಿದ್ದ ರೆಡ್ಡಿಗೆ ಮತ್ತೆ ಸಂಕಷ್ಟ..?

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ 2016 ರ ನವೆಂಬರ್ 17 ರಂದು ಅದ್ಧೂರಿಯಾಗಿ ಪುತ್ರಿಯ ಮದುವೆ ಮಾಡಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಖರ್ಚು ವೆಚ್ಚದ ವಿವರದ ವಿವಾದಕ್ಕೆ ಮರುಜೀವ ಬಂದಿದ್ದು, ಕೇಂದ್ರ ವಿಚಕ್ಷಣಾ ದಳ ತನಿಖೆ ನಡೆಸುವಂತೆ ಸಿ.ಬಿ.ಐ.ಗೆ ಪತ್ರ ಬರೆದಿದ್ದು, ಮರು ತನಿಖೆ ನಡೆಸುವ ಸಾಧ್ಯತೆ ಇದೆ.

ಸಾಮಾಜಿಕ ಕಾರ್ಯಕರ್ತ ಟಪಾಲ್ ಗಣೇಶ್ ಅವರು, ಅದ್ಧೂರಿ ಮದುವೆಗಾಗಿ ಖರ್ಚು ಮಾಡಿದ ಹಣದ ಮೂಲ ಪತ್ತೆ ಮಾಡುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ನೋಟ್ ಬ್ಯಾನ್ ಆಗಿದ್ದ ಸಂದರ್ಭದಲ್ಲಿ ಜನ ಸಾಮಾನ್ಯರು ಹಣಕ್ಕಾಗಿ ಪರದಾಡುವ ಸಂದರ್ಭದಲ್ಲಿ ನೂರಾರು ಕೋಟಿ ಖರ್ಚು ಮಾಡಿ ರೆಡ್ಡಿ ಮಗಳ ಮದುವೆ ಮಾಡಿದ್ದಾರೆ ಎಂದು ದೂರಲಾಗಿತ್ತು.

ಇದಾದ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಳ್ಳಾರಿಯಲ್ಲಿನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ರೆಡ್ಡಿಯವರು ತಾವು ಹಣ ಪಡೆದ ಕಂಪನಿಗಳ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದರು. ಆ ಕಂಪನಿಗಳು ರೆಡ್ಡಿಯವರ ಓಬಳಾಪುರಂ ಮೈನಿಂಗ್ ಕಂಪನಿಯ ಹಣದಿಂದ ಆರಂಭವಾದ ಕಂಪನಿಗಳಾಗಿವೆ ಎಂದು ಹೇಳಲಾಗಿದೆ.

ಕೇಂದ್ರ ವಿಚಕ್ಷಣ ದಳದಿಂದ ಸಿ.ಬಿ.ಐ.ಗೆ. ಪತ್ರ ಬರೆದಿರುವುದರಿಂದ ಮತ್ತೆ ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...