alex Certify
ಕನ್ನಡ ದುನಿಯಾ       Mobile App
       

Kannada Duniya

ಜನಾರ್ದನ ರೆಡ್ಡಿ ಅರೆಸ್ಟ್: ನ್ಯಾಯಾಧೀಶರ ಮುಂದೆ ಹಾಜರಿಗೆ ಸಿದ್ಧತೆ

ಅಂಬಿಡೆಂಟ್ ಕಂಪನಿ ಜೊತೆ 20 ಕೋಟಿ ರೂಪಾಯಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಣಿದಣಿ ಜನಾರ್ದನ ರೆಡ್ಡಿಯವರನ್ನು ಬಂಧಿಸಲಾಗಿದೆ. ಸಿಸಿಬಿ ವಿಚಾರಣೆಯಲ್ಲಿದ್ದ ಜರ್ನಾದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಜೆ ನಾಲ್ಕು ಗಂಟೆ ಸುಮಾರಿಗೆ ನ್ಯಾಯಾಧೀಶರ ಮುಂದೆ ಜನಾರ್ದನ ರೆಡ್ಡಿ ಹಾಜರುಪಡಿಸಲಾಗುವುದು. ನ್ಯಾಯಾಧೀಶರ ಮನೆ ಮುಂದೆ ಬಿಗಿ ಭದ್ರತೆ ಒದಗಿಸಲಾಗಿದೆ. ಸದ್ಯ ಜರ್ನಾದನ ರೆಡ್ಡಿಯವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗುತ್ತಿದೆ. ಸಾಕ್ಷಿ ಆಧರಿಸಿ ಕ್ರಮ ಕೈಗೊಂಡಿದ್ದೇವೆ. ಹಣ ರಿಕವರಿ ಮಾಡಿ ಹಂಚುತ್ತೇವೆಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.

ರೆಡ್ಡಿಯವರನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಕೇಳುವ ಸಾಧ್ಯತೆಯಿದೆ. ಡೀಲ್ ಹೊರ ಬರ್ತಿದ್ದಂತೆ ಜನಾರ್ದನ ರೆಡ್ಡಿ ತಲೆ ಮರೆಸಿಕೊಂಡಿದ್ದರು ಎನ್ನಲಾಗಿತ್ತು. ಶನಿವಾರ ವಕೀಲರ ಜೊತೆ ಸಿಸಿಬಿ ಪೊಲೀಸ್ ಮುಂದೆ ಹಾಜರಾಗಿದ್ದರು. ತಡರಾತ್ರಿ 2 ಗಂಟೆಯವರೆಗೆ ವಿಚಾರಣೆ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...