alex Certify
ಕನ್ನಡ ದುನಿಯಾ       Mobile App
       

Kannada Duniya

ಕುಚುಕು ಗೆಳೆಯನ ಗೆಲುವಿಗೆ ಟೊಂಕ ಕಟ್ಟಿ ನಿಂತ ಜನಾರ್ಧನ ರೆಡ್ಡಿ

ರಾಜಕೀಯದಲ್ಲಿ ಕುಚುಕು ಗೆಳೆಯರು ಅಂದ್ರೆ ನೆನಪಿಗೆ ಬರೋದು ಮಲ್ಲಿಕಾರ್ಜುನ್ ಖರ್ಗೆ ಹಾಗೂ ಧರ್ಮಸಿಂಗ್. ಇವರನ್ನು ಬಿಟ್ಟರೆ ಸದ್ಯ ಎಲ್ಲರ ಕಣ್ಣ ಮುಂದೆ ಬರೋರು ಅಂದ್ರೆ ಬಳ್ಳಾರಿಯ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು.

ಜನಾರ್ಧನ ರೆಡ್ಡಿಗೆ ಬಿಜಿಪಿ ಟಿಕೇಟ್ ನೀಡದಿದ್ದರೇ ಏನಂತೆ, ಗೆಳೆಯನ ಗೆಲುವಿಗಾಗಿ ರೆಡ್ಡಿ ತಮ್ಮ ಮನೆಯನ್ನು ಸದ್ಯ ಶಿಫ್ಟ್ ಮಾಡಿದ್ದಾರೆ. ಹೌದು….ಜನಾರ್ಧನ ರೆಡ್ಡಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಮನೆ ಮಾಡಿದ್ದಾರೆ.

ಈ ಮನೆ ಮಾಡಿರುವ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಗೆಳೆಯ ಶ್ರೀರಾಮುಲು ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸೋದೇ ಆಗಿದೆ. ಬಳ್ಳಾರಿ ಹಾಗೂ ಚಿತ್ರದುರ್ಗ ಬೇರೆ ಜಿಲ್ಲೆಗಳಾದ್ರು ಸಹ, ಜನರ ಪ್ರೀತಿ ಒಂದೇ ರೀತಿ ಇದೆ. ಕೋಟೆ ನಾಡಿನಲ್ಲಿ ಕಮಲ ಅರಳಬೇಕು ಎಂಬುದೇ ನನ್ನ ಆಶಯ ಎಂದಿದ್ದಾರೆ ಜನಾರ್ಧನ ರೆಡ್ಡಿ.

ನಾನು ಬಿಜೆಪಿ ಪಕ್ಷದಿಂದ ಟಿಕೆಟ್ ಕೇಳಿಲ್ಲ. ಪಕ್ಷದ ಅಭಿವೃದ್ಧಿಗೆ ಶ್ರಮಿಸುವೆ. ಈ ಬಾರಿ ಕಮಲ ಪಕ್ಷ ಗದ್ದುಗೆ ಏರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗ್ತಾರೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...