alex Certify
ಕನ್ನಡ ದುನಿಯಾ       Mobile App
       

Kannada Duniya

ಜನಾರ್ಧನ ರೆಡ್ಡಿ ಮಗಳ ಮದುವೆಯಲ್ಲಿ ಅದ್ಧೂರಿ ಮ್ಯೂಸಿಕಲ್ ನೈಟ್

r-brahmani

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಗಳ ಮದುವೆಯ ಪೂರ್ವಭಾವಿಯಾಗಿ ನಡೆದ ಮ್ಯೂಸಿಕಲ್ ನೈಟ್ ಅದ್ಧೂರಿಯಾಗಿತ್ತು.

ಜನಾರ್ಧನ ರೆಡ್ಡಿ ಪುತ್ರಿ ಬ್ರಹ್ಮಿಣಿ ಮತ್ತು ಅಳಿಯ ರಾಜೀವ ರೆಡ್ಡಿ ಅವರು ಸಿನಿಮಾ ಗೀತೆಗಳಿಗೆ ಸ್ಟೆಪ್ ಹಾಕಿದ್ದಾರೆ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿಯಂತೂ ಸಿನಿಮಾ ಸ್ಟಾರ್ ಗಳ ರೀತಿಯಲ್ಲಿ ಟಾಲಿವುಡ್, ಬಾಲಿವುಡ್ ಹಾಡುಗಳಿಗೆ ಭರ್ಜರಿ ಸ್ಟೆಪ್ ಹಾಕಿದ್ದು, ಗಮನ ಸೆಳೆಯುವಂತಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮಗಳಿಗಾಗಿಯೇ ನಿರ್ಮಿಸಿದ್ದ ಅದ್ಧೂರಿ ವೇದಿಕೆಯಲ್ಲಿ ನಡೆದ ಮ್ಯೂಸಿಕಲ್ ನೈಟ್ ಜೋರಾಗಿತ್ತು.

ಅರಮನೆ ಮೈದಾನದಲ್ಲಿಯೇ ಮದುವೆ ಮಂಟಪ, ವಧು, ವರರ ಕುಟುಂಬದ ಮನೆ, ಹಳ್ಳಿಯ ಚಿತ್ರಣವನ್ನು ಸಿನಿಮಾ ಮಾದರಿ ಸೆಟ್ ಮಾದರಿ ನಿರ್ಮಿಸಲಾಗಿದ್ದು, ಮದುವೆ ಕಾರ್ಯಗಳು ನಡೆದಿವೆ. ವಧು, ವರರ ಕುಟುಂಬದವರು, ಆತ್ಮೀಯರು ಭಾಗಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...