alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಲ್ಲೆ ಮಹಿಳಾ ವಾರ್ಡನ್ ಮೇಲೆ ಕೈದಿ ದಾಳಿ

crime-against-w

ವಿಚಾರಣಾಧೀನ ಕೈದಿಯೊಬ್ಬ ಮಹಿಳಾ ವಾರ್ಡನ್ ಮೇಲೆ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ವಿಚಾರಣಾಧೀನ ಕೈದಿ ಮಹೇಶ್ವರ ಎಂಬಾತ ವಾರ್ಡನ್ ಸಾವಿತ್ರಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಅವರನ್ನು ಬೆಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ.

ನಾನು ಜೈಲಿಗೆ ಬರಲು ನಿಮ್ಮಂತಹ ಮಹಿಳೆಯರೇ ಕಾರಣ ಎಂದು ಆಕ್ರೋಶದಿಂದ ಹೇಳುತ್ತಾ, ಜೈಲಿನಲ್ಲಿದ್ದ ಗುದ್ದಲಿಯಿಂದ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಸಾವಿತ್ರಿ ಅವರ ತಲೆಗೆ ಪೆಟ್ಟಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ನಿಮ್ಹಾನ್ಸ್ ಗೆ ಸೇರಿಸಲಾಗಿದೆ. ಹಾಸನದ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಮಹೇಶ್ವರನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದರು. ಜೈಲಿನಲ್ಲಿ ವಾರ್ಡನ್ ಸಾವಿತ್ರಿ ಕುಳಿತಿದ್ದ ಸಂದರ್ಭದಲ್ಲಿ ಮಹೇಶ್ವರ್ ಹಲ್ಲೆ ಮಾಡಿದ್ದಾನೆ.

ನಾನು ಜೈಲಿಗೆ ಬರಲು ನಿಮ್ಮಂತಹ ಮಹಿಳೆಯರೇ ಕಾರಣ ಎಂದು ತಲೆಗೆ ಗುದ್ದಲಿಯಿಂದ ಜೋರಾಗಿ ಹೊಡೆದಿದ್ದು, ಭಾರೀ ರಕ್ತಸ್ರಾವವಾಗಿದ್ದ ಸಾವಿತ್ರಿ ಅವರನ್ನು ಆಂಬುಲೆನ್ಸ್ ನಲ್ಲಿ ನಿಮ್ಹಾನ್ಸ್ ಗೆ ಕರೆದೊಯ್ಯಲಾಗಿದೆ. ಆರೋಪಿ ಮಹೇಶನನ್ನು ಹಾಸನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...