alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಲ್ಲಿದ್ರೂ ನಲಪಾಡ್ ಹ್ಯಾರಿಸ್ ಗೆ ರಾಜಾತಿಥ್ಯ…?

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ತಡರಾತ್ರಿವರೆಗೂ ಮೊಬೈಲ್ ನಲ್ಲಿ ಮಾತನಾಡಿದ್ದಾನೆ.

ಎ 4 ಆರೋಪಿ ಮಂಜುನಾಥ್ ಮನೆಯಿಂದ ತಂದಿದ್ದ ಊಟ ಮಾಡಿದ ನಲಪಾಡ್ ಮತ್ತು ಆತನ ಸ್ನೇಹಿತರು ನಿದ್ದೆಗೆ ಜಾರಿದ್ದಾರೆ. ನಲಪಾಡ್ ಮಾತ್ರ ರಾತ್ರಿವರೆಗೂ ಮೊಬೈಲ್ ನಲ್ಲಿ ಸ್ನೇಹಿತರು, ಪೋಷಕರೊಂದಿಗೆ ಮಾತನಾಡಿದ್ದಾನೆ ಎನ್ನಲಾಗಿದೆ.

ನಲಪಾಡ್ ಹ್ಯಾರಿಸ್ ತನ್ನ ಜಾಮೀನು ಅರ್ಜಿಯ ವಿಚಾರಣೆ ಕುರಿತಾಗಿ ತಡರಾತ್ರಿ 1.30 ರ ವರೆಗೂ ಮೊಬೈಲ್ ನಲ್ಲಿ ಮಾತನಾಡಿದ್ದಾನೆ. ನಲಪಾಡ್ ಇರುವ ಸೆಲ್ ಕಡೆಗೆ ಯಾರೂ ಹೋಗದಂತೆ ಜೈಲಿನ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ ನಲಪಾಡ್ ಹ್ಯಾರಿಸ್ ಮತ್ತು ಆತನ ಸಹಚರರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಇಂದು ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...