alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮೀಯ ರೀತಿಯಲ್ಲಿ ವಿಚಾರಣಾಧೀನ ಕೈದಿಗಳ ಎಸ್ಕೇಪ್

jail nm

ಬೆಳಗಾವಿ: ಮೂವರು ವಿಚಾರಣಾಧೀನ ಕೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿರುವ ಉಪ ಕಾರಾಗೃಹದಲ್ಲಿ ನಡೆದಿದೆ. ಶೌಚಾಲಯದ ಕಲ್ಲು ಕೊರೆದು ಇವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಚಿಕ್ಕೋಡಿಯ ಉಪ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳಾದ ಮಹಾರಾಷ್ಟ್ರದ ದೀಪಕ್, ಅನಿಲ್ ಲಂಬುಗೋಳ, ರಾಜು ಗುಂಜಾಳಕರ್ ಅವರು ಪರಾರಿಯಾದವರು. ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾದ ಆರೋಪದ ಮೇಲೆ ಬಂಧಿತರಾಗಿದ್ದು, ಚಿಕ್ಕೋಡಿ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದರು. ಶೌಚಾಲಯದ ಕಲ್ಲಿನ ಗೋಡೆ ಕೊರೆದು ಈ ಮೂವರೂ ಪರಾರಿಯಾಗಿದ್ದಾರೆ. ಇವರನ್ನು 3 ನೇ ನಂಬರ್ ಸೆಲ್ ನಲ್ಲಿ ಇಡಲಾಗಿತ್ತು.

ಈ ಜೈಲಿನ ಕಟ್ಟಡದ ಗೋಡೆ ಕೊರೆದು ಕೈದಿಗಳು ಪರಾರಿಯಾದರೂ, ಸಿಬ್ಬಂದಿಯ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದ್ದು, ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...