alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮೀಯ ರೀತಿಯಲ್ಲಿ ಕೈದಿಗಳು ಎಸ್ಕೇಪ್

jail nm 123

ಕಲಬುರಗಿಯ ಕೇಂದ್ರ ಕಾರಾಗೃಹ ಮತ್ತೊಮ್ಮೆ ಸುದ್ದಿಯಲ್ಲಿದೆ. ಇಲ್ಲಿನ ಜೈಲ್ ನಿಂದ ನಾಲ್ವರು ಕೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಜೈಲಿನ ಗೋಡೆ ಕೊರೆದು ಪರಾರಿಯಾಗಿದ್ದು, ಇದಕ್ಕೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಶಿವಕುಮಾರ್, ಲಕ್ಷ್ಮಣ್, ಸುನೀಲ್, ತಾಜುದ್ದೀನ್ ಪರಾರಿಯಾದ ಕೈದಿಗಳು. ಇವರು ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ, ಕಲಬುರಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಬ್ಯಾರಕ್ ನ ಕಬ್ಬಿಣದ ಸರಳು ಮುರಿದು, ಹೊರಗೆ ಬಂದ ಕೈದಿಗಳು, ಅಲ್ಲಿಂದ ಕಾಂಪೌಂಡ್ ಗೋಡೆಯ ಸಮೀಪ ಬಂದಿದ್ದಾರೆ. ಅಲ್ಲಿ ಬಟ್ಟೆ ಮೂಲಕ ಹತ್ತಿ ಕೆಳಗಿಳಿದಿದ್ದು, ಇನ್ನೊಂದು ಕಾಂಪೌಂಡ್ ಗೋಡೆಯನ್ನು ಕೊರೆದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಕಲಬುರಗಿ ಸೆಂಟ್ರಲ್ ಜೈಲ್ ನಿಂದ ಕೈದಿಗಳು ಪರಾರಿಯಾದ ಎರಡನೇ ಪ್ರಕರಣ ಇದಾಗಿದೆ. ಕಳೆದ ಬಾರಿ ಮೂವರು ಕೈದಿಗಳು ಪರಾರಿಯಾಗಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜೈಲು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಸಂಬಂಧ ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...