alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಪ್ರೇರಿತ ದಾಳಿ ಆರೋಪಕ್ಕೆ ಹೀಗಿದೆ ಐ.ಟಿ. ಪ್ರತಿಕ್ರಿಯೆ

ಬೆಂಗಳೂರು: ಐ.ಟಿ. ಇಲಾಖೆಯಿಂದ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ರಾಜಕೀಯ ಪ್ರೇರಿತ ದಾಳಿ ನಡೆಸಲಾಗ್ತಿದೆ ಎಂಬ ಆರೋಪಕ್ಕೆ ಕರ್ನಾಟಕ –ಗೋವಾ ಐ.ಟಿ. ಚೀಫ್ ಇನ್ವೆಎಸ್ಟಿಗೇಷನ್ ಕಮಿಷನರ್ ರಜನೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನಾವು ಯಾವುದೇ ದಾಳಿಯನ್ನು ರಾಜಕೀಯ ಪ್ರೇರಿತವಾಗಿ ನಡೆಸಿಲ್ಲ. ಐ.ಟಿ. ಇಲಾಖೆ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಈ ಕುರಿತಾಗಿ ಮಾಡಿರುವ ಆರೋಪಗಳು ನಿರಾಧಾರವಾಗಿವೆ. ಯಾವುದೇ ಆರೋಪಗಳಿದ್ದರೂ, ತಮ್ಮನ್ನು ಸಂಪರ್ಕಿಸಬಹುದು. ಕೋರ್ಟ್ ಗೂ ಹೋಗಬಹುದಾಗಿದೆ ಎಂದು ಹೇಳಿದ್ದಾರೆ.

ಬಂದ ಮಾಹಿತಿಯನ್ನು ಪರಿಶೀಲಿಸಿ ಮೇಲಿನ ಅಧಿಕಾರಿಗಳ ಆದೇಶದ ಮೇರೆಗೆ ದಾಳಿಗಳನ್ನು ನಡೆಸಲಾಗುವುದು. ರಾಜಕೀಯ ಪ್ರೇರಿತ ಆರೋಪಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...