alex Certify
ಕನ್ನಡ ದುನಿಯಾ       Mobile App
       

Kannada Duniya

3 ಹಗಲು, ರಾತ್ರಿಯಾದ್ರೂ ಮುಗಿದಿಲ್ಲ ತಪಾಸಣೆ

dk-sat-d

ಬೆಂಗಳೂರು: ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ಮಾಡಿರುವ ಐ.ಟಿ. ಅಧಿಕಾರಿಗಳು, ಕಳೆದ 3 ಹಗಲು, 3 ರಾತ್ರಿಯಿಂದ ನಿರಂತರವಾಗಿ ತಪಾಸಣೆ ನಡೆಸಿದ್ದಾರೆ.

ತಡರಾತ್ರಿ ಪರಿಶೀಲನೆ ಕಾರ್ಯ ಚುರುಕುಗೊಂಡಿದ್ದು, ದೆಹಲಿಯಿಂದ ಆಗಮಿಸಿದ್ದ ವಿಶೇಷ ಅಧಿಕಾರಿಗಳ ತಂಡ ಕಿರಿಯ ಅಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳನ್ನು ಪರಿಶೀಲಿಸಿದೆ.

ಇದರೊಂದಿಗೆ ಮೂವರು ಆಡಿಟರ್ ಗಳನ್ನು ಕೂಡ ಕರೆಸಿಕೊಂಡು ಪರಿಶೀಲನೆ ನಡೆಸಲಾಗಿದೆ. ಸದಾಶಿವ ನಗರದಲ್ಲಿರುವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಧಿಕಾರಿಗಳ ತಂಡ ಬೀಡುಬಿಟ್ಟಿದ್ದು, ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿದೆ ಎನ್ನಲಾಗಿದೆ.

ಮೊದಲ ದಿನ ಕಾಣಿಸಿಕೊಂಡಿದ್ದ ಡಿ.ಕೆ. ಶಿವಕುಮಾರ್ ಇಂದು ಬೆಳಿಗ್ಗೆ ಮೊದಲ ಮಹಡಿಯ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು, ಕೆಳಗಿದ್ದವರಿಗೆ ಕೈ ಮುಗಿದು ಒಳಗೆ ಹೋಗಿದ್ದಾರೆ.

ಆಗಸ್ಟ್ 2 ರಂದು ಬೆಳಿಗ್ಗೆ ರಾಮನಗರದ ಬಿಡದಿ ಬಳಿಯ ರೆಸಾರ್ಟ್ ನಲ್ಲಿ ತಂಗಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಐ.ಟಿ. ಅಧಿಕಾರಿಗಳು ಮನೆಗೆ ಕರೆದುಕೊಂಡು ಬಂದು ಪರಿಶೀಲನೆ ನಡೆಸಿದ್ದಾರೆ. ಅವರ ಸಂಬಂಧಿಕರು, ಆಪ್ತರ ಮನೆ ಮೇಲೆಯೂ ದಾಳಿ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...