alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಸಾರಿಗೆ ಉದ್ಯಮಿಯ ಬ್ಲಾಕ್ ಅಂಡ್ ವೈಟ್ ದಂಧೆ

ben-note

ಬೆಂಗಳೂರು: ದೊಡ್ಡ ಮೊತ್ತದ ನೋಟ್ ಬ್ಯಾನ್ ಬಳಿಕ, ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆ ಜೋರಾಗಿ ನಡೆಯುತ್ತಿದ್ದು, ಐ.ಟಿ. ಅಧಿಕಾರಿಗಳು ನಿರಂತರ ದಾಳಿ ನಡೆಸಿ, ಅಕ್ರಮ ಹಣ ಜಪ್ತಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ ಐ.ಟಿ. ಅಧಿಕಾರಿಗಳು, ಆನೇಕಲ್ ಸಾರಿಗೆ ಉದ್ಯಮಿಯೊಬ್ಬರ ಬ್ಲಾಕ್ ಅಂಡ್ ದಂಧೆಯನ್ನು ಬಯಲು ಮಾಡಿದ್ದಾರೆ.

ಕಾಳಧನಿಕರ ಸೋಗಿನಲ್ಲಿ ಟ್ರಾನ್ಸ್ ಪೋರ್ಟ್ ಕಚೇರಿಗೆ ಹೋಗಿದ್ದ ಅಧಿಕಾರಿಗಳು ತಮ್ಮಲ್ಲಿರುವ ಹಳೆ ನೋಟಿಗೆ ಕಮಿಷನ್ ಪಡೆದು ಹೊಸ ನೋಟ್ ಕೊಡುವಂತೆ ಕೇಳಿಕೊಂಡಿದ್ದಾರೆ.

ಈ ದಂಧೆಯಲ್ಲಿ ನಿರತನಾಗಿದ್ದ ಉದ್ಯಮಿ, ಅವರು ಐ.ಟಿ. ಅಧಿಕಾರಿಗಳೆಂದು ಅರಿಯದೇ ಹಣ ಬದಲಾವಣೆಗೆ ಒಪ್ಪಿದ್ದಾರೆ.

ಮೊದಲೇ ಪ್ಲಾನ್ ಮಾಡಿಕೊಂಡು 2 ತಂಡಗಳಾಗಿ ಬಂದಿದ್ದ ಐ.ಟಿ. ಅಧಿಕಾರಿಗಳು, ಉದ್ಯಮಿಯ ಮನೆ ಮೇಲೆ ದಾಳಿ ಮಾಡಿದ್ದು, 1.07 ಕೋಟಿ ರೂ. ಹೊಸ ನೋಟ್ ಸೇರಿ 1.15 ಕೋಟಿ ರೂಪಾಯಿ ಜಪ್ತಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...