alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಿಎಂ ಸಮ್ಮತಿಯಿಂದಲೇ ಸಂಸದರಿಗೆ ಐಫೋನ್ ಗಿಫ್ಟ್’

ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರಿಗೆ ಕೊಡುಗೆಯಾಗಿ ನೀಡಿರುವ ಐಫೋನ್ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಾರದಿರಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಶಿವಮೊಗ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರಿಗೆ ಮೊಬೈಲ್ ಫೋನ್ ಕೊಡುಗೆ ನೀಡಿದ ವಿಚಾರ ಎಲ್ಲೆಡೆ ಸಾಕಷ್ಟು  ಚರ್ಚೆಯಾಗಿದೆ. ರಾಜ್ಯ ಸರ್ಕಾರವೇ ಇದನ್ನು ಕೊಟ್ಟಿದೆ ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ. ಆದರೆ ಮುಖ್ಯಮಂತ್ರಿಯವರನ್ನು ರಕ್ಷಣೆ ಮಾಡುವ ಉದ್ಧೇಶದಿಂದ ಸಚಿವ ಡಿ.ಕೆ.ಶಿವಕುಮಾರ್ ತಾವು ಮೊಬೈಲ್ ಫೋನ್ ಕೊಡುಗೆಯಾಗಿ ನೀಡಿದ್ದೇನೆ ಎನ್ನುತ್ತಿದ್ದಾರೆ ಎಂದರು.

ದೆಹಲಿಯಲ್ಲಿರುವ ಕರ್ನಾಟಕ ಭವನ ಸರ್ಕಾರಕ್ಕೆ ಸೇರಿದ್ದಾಗಿದೆ. ಅಲ್ಲಿ ಐಎಎಸ್ ಹುದ್ದೆಯ ಅಧಿಕಾರಿಗಳಿದ್ದಾರೆ. ಅವರನ್ನು ಬಳಸಿಕೊಂಡು ಸಂಸದರಿಗೆ ಮೊಬೈಲ್ ಫೋನ್ ಗಳನ್ನು ವಿತರಿಸಲಾಗಿದೆ. ಅಧಿಕಾರಿಗಳು ಸರ್ಕಾರದ ಅಂಗವಾಗಿದ್ಧಾರೆ. ಮೊಬೈಲ್ ಫೋನ್ ವಿತರಿಸಲು ಅವರೇನು ಡಿ.ಕೆ. ಶಿವಕುಮಾರ್ ಮನೆ ಆಳಲ್ಲ. ಆಗಿರುವ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...