alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಸಂಸದರಿಗೆ ಐಫೋನ್ ಕೊಟ್ಟಿದ್ಯಾರೆಂಬ ಸಂಗತಿ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ದೆಹಲಿಗೆ ಭೇಟಿ ನೀಡಿದ್ದು, ರಾಜ್ಯದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ. ಇದರ ಮಧ್ಯೆ ಸಂಸದರಿಗೆ ಬೆಲೆಬಾಳುವ ಐಫೋನ್ ಮತ್ತು ಬ್ಯಾಗ್ ಗಿಫ್ಟ್ ಆಗಿ ನೀಡಲಾಗಿದೆ ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು.

ತಮ್ಮ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಯೋಜನೆ ಘೋಷಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಮಾತುಗಳನ್ನಾಡಿದ್ದರ ಮಧ್ಯೆ ದುಬಾರಿ ವೆಚ್ಚ ಮಾಡಿ ಸಂಸದರಿಗೆ ಐಫೋನ್ ನೀಡುವ ಔಚಿತ್ಯವಾದರೂ ಏನಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಐಫೋನ್ ನೀಡಿರುವ ಯಾವುದೇ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಹಾಗೂ ಇದಕ್ಕೆ ಸರ್ಕಾರದ ಹಣವನ್ನೂ ವ್ಯಯಿಸಿಲ್ಲವೆಂದು ಹೇಳಿದ್ದರು.

ಇದೀಗ ಸಂಸದರಿಗೆ ಐಫೋನ್ ನೀಡಿದ್ದು ಯಾರೆಂಬ ಸಂಗತಿ ಬಹಿರಂಗವಾಗಿದ್ದು, ಇದನ್ನು ಸಚಿವ ಡಿ.ಕೆ. ಶಿವಕುಮಾರ್ ನೀಡಿದ್ದಾರೆಂದು ಹೇಳಲಾಗಿದೆ. ಖುದ್ದು ಡಿ.ಕೆ. ಶಿವಕುಮಾರ್ ಅವರೇ ಈ ಸಂಗತಿಯನ್ನು ಬಹಿರಂಗಪಡಿಸಿದ್ದು, ಒಳ್ಳೆಯ ಮನಸ್ಸಿನಿಂದ ಗಿಫ್ಟ್ ನೀಡಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇದನ್ನು ನೀಡಿದ್ದು ತಪ್ಪು ಎನ್ನುವುದಾದರೆ ನನ್ನನ್ನು ಗಲ್ಲಿಗೇರಿಸಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...