alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಸಾಧ್ಯತೆ ಹುಟ್ಟುಹಾಕಿದ ‘ಇನ್ವೆಸ್ಟ್ ಕರ್ನಾಟಕ’

invest

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಮಾಡಿದ ಮನವಿಗೆ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಉದ್ಯಮಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಆಯೋಜಿಸಿರುವ ಮಹತ್ವದ ‘ಇನ್ವೆಸ್ಟ್ ಕರ್ನಾಟಕ’ ಹೂಡಿಕೆಗೆ ಕರ್ನಾಟಕ ಪ್ರಶಸ್ತ ಸ್ಥಳ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ.

ಮಹತ್ವದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕರ್ನಾಟಕದಲ್ಲಿ ಕೌಶಲ್ಯಾಧಾರಿತ ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ ಇದ್ದು, ಹೂಡಿಕೆಗೆ ಅನುಕೂಲವಾಗಿದೆ ಎಂದು ಹೇಳಿದರು. ಅವರ ಮಾತಿನಂತೆ ಮೊದಲ ದಿನವೇ ವಿವಿಧ ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿವೆ. ಅದಾನಿ ಗ್ರೂಪ್ ವತಿಯಿಂದ 11,500 ಕೋಟಿ ರೂ. ವೆಚ್ಛದಲ್ಲಿ 1 ಸಾವಿರ ಮೆಗಾವ್ಯಾಟ್ ಸೌರವಿದ್ಯುತ್ ಘಟಕ ನಿರ್ಮಿಸಲಾಗುವುದು. ಗ್ಲಾಕ್ಸೋಸ್ಮಿತ್ ಕ್ಲೈನ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ರೂ.1000 ಕೋಟಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ತುಮಕೂರಿನಲ್ಲಿ ಟೊಯೊಟ 410 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಬೆಳಗಾವಿಯಲ್ಲಿ ಎಕ್ಯುಸ್ ಏರೋಸ್ಪೇಸ್ 334 ಕೋಟಿ ರೂ. ಬಂಡವಾಳ ತೊಡಗಿಸಲಿದೆ. ಕೋಲಾರದಲ್ಲಿ ಟಾಟಾ ಸ್ಟ್ರಾಟೆಜೆಕ್ ಇಂಜಿನ್ ಡಿವಿಜನ್ ಘಟಕ ಸ್ಥಾಪನೆಗೆ450 ಕೋಟಿ ರೂ. ಬಂಡವಾಳ ಹೂಡಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೋಲ್ವೋ 700 ಕೋಟಿ ರೂ. ಬಂಡವಾಳ ತೊಡಗಿಸಲಿದೆ. ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಕಣ್ವ ಫ್ಯಾಷನ್ಸ್ 55 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...