alex Certify
ಕನ್ನಡ ದುನಿಯಾ       Mobile App
       

Kannada Duniya

ಮಿನರಲ್ ವಾಟರ್ ಬಾಟಲ್ ನಲ್ಲಿ ಕಸಕಡ್ಡಿ

ತುಮಕೂರು: ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ತರಿಸಲಾಗಿದ್ದ ಮಿನರಲ್ ವಾಟರ್ ಬಾಟಲ್ ನಲ್ಲಿ ಹುಳು, ಕಸ-ಕಡ್ಡಿಗಳಿರುವುದನ್ನು ಕಂಡು ಜನರು ಆತಂಕಕ್ಕೀಡಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಇಲ್ಲಿನ ತಿರುಮಲ ಕಲ್ಯಾಣ ಮಂಟಪದಲ್ಲಿ ನಡೆಯುತಿದ್ದ ಮದುವೆಗಾಗಿ ’ಬ್ಲೂ ಬ್ರೀಜ್’ ಹೆಸರಿನ ಮಿನರಲ್ ವಾಟರ್ ಬಾಟಲ್ ನ್ನು ತರಿಸಲಾಗಿತ್ತು. ತರಿಸಿದ್ದ 7 ಬಾಕ್ಸ್ ನಲ್ಲಿರುವ ಬಾಟಲ್ ಗಳಲ್ಲಿಯೂ ಕಸ-ಕಡ್ಡಿ, ಹುಳ ಕಂಡು ಬಂದಿದೆ.

ಬ್ಲೂ ಬ್ರೀಜ್ ಮಿನರಲ್ ವಾಟರ್ ಬಾಟಲ್, ಶೈಲಾ ಇಂಡಸ್ಟ್ರೀಸ್ ಗೆ ಸೇರಿದ್ದಾಗಿದೆ. ಇದನ್ನು ತುಮಕೂರಿನ ರಂಗಾಪುರ ಕೈಗಾರಿಕಾ ಪ್ರದೇಶದಲ್ಲಿ ತಯಾರು ಮಾಡಲಾಗುತ್ತಿದೆ. ಯಾವುದೇ ಮುಂಜಾಗ್ರತೆ ವಹಿಸದೇ ಅಶುದ್ಧ ನೀರನ್ನು ಹೀಗೆ ಬಾಟಲ್ ಗಳಲ್ಲಿ ಸೀಲ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಈಗ ಬ್ಲೂ ಬ್ರೀಜ್ ಮಿನರಲ್ ವಾಟರ್ ಬಾಟಲ್ ತಯಾರಿಕಾ ಕಂಪೆನಿ ವಿರುದ್ಧ ದೂರು ನೀಡಲು ಗ್ರಾಹಕರು ನಿರ್ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...