alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ 5 ನೇ ಸ್ಥಾನ

narendra-campaign-courtesy-surprise-thursday-nationwide-minister_24cfcab8-308d-11e7-aae9-524ad91d2809

ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮಧ್ಯಪ್ರದೇಶ ಮುಂದಿದೆ. ಮೊದಲ ಸ್ಥಾನದಲ್ಲಿ ಇಂದೋರ್ ಇದ್ರೆ ಎರಡನೇ ಸ್ಥಾನ ಭೋಪಾಲ್ ಗೆ ಸಿಕ್ಕಿದೆ. ರಾಜ್ಯದ ಮೈಸೂರು 5 ನೇ ಸ್ಥಾನದಲ್ಲಿದ್ದರೆ 63ನೇ ಸ್ಥಾನದಲ್ಲಿ ಮಂಗಳೂರಿದೆ. ದುರಂತವೆಂದ್ರೆ 210ನೇ ಸ್ಥಾನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿದೆ. 434 ನಗರಗಳ ಸ್ವಚ್ಛತೆಯ ಸಮೀಕ್ಷೆ ನಡೆಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ನಂತ್ರ ಮೊದಲಿಗಿಂತ ನಗರಗಳು ಹೆಚ್ಚು ಸುಂದರವಾಗಿವೆ ಎಂದು ಶೇಕಡಾ 83ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಸ್ವಚ್ಛ ನಗರಗಳ ಪಟ್ಟಿ ಹೀಗಿದೆ :

ಮೊದಲ ಸ್ಥಾನದಲ್ಲಿ ಇಂದೋರ್

ಎರಡನೇ ಸ್ಥಾನದಲ್ಲಿ ಭೋಪಾಲ್

ಮೂರನೇ ಸ್ಥಾನದಲ್ಲಿ ವಿಶಾಖಪಟ್ಟಣಂ

ನಾಲ್ಕನೇ ಸ್ಥಾನದಲ್ಲಿ ಸೂರತ್

ಐದನೇ ಸ್ಥಾನದಲ್ಲಿ ಮೈಸೂರು

63ನೇ ಸ್ಥಾನದಲ್ಲಿ ಮಂಗಳೂರು

143 ಸ್ಥಾನದಲ್ಲಿ ಉಡುಪಿ

147ನೇ ಸ್ಥಾನದಲ್ಲಿ ಶಿವಮೊಗ್ಗ

148ನೇ ಸ್ಥಾನದಲ್ಲಿ ಮಂಡ್ಯ

152ನೇ ಸ್ಥಾನದಲ್ಲಿ ತುಮಕೂರು

199ನೇ ಸ್ಥಾನದಲ್ಲಿ ಹುಬ್ಬಳ್ಳಿ

203ರಲ್ಲಿ ಬಾಗಲಕೋಟೆ

210ನೇ ಸ್ಥಾನದಲ್ಲಿ ಬೆಂಗಳೂರು

217ನೇ ಸ್ಥಾನದಲ್ಲಿ ಭದ್ರಾವತಿ

227ನೇ ಸ್ಥಾನದಲ್ಲಿ ಹಾಸನ

317ನೇ ಸ್ಥಾನದಲ್ಲಿ ಹೊಸಪೇಟೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...