alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ಮಕ್ಕಳ ಫೋಟೋ ಹಾಕುವ ಮೊದಲು ಇದನ್ನೊಮ್ಮೆ ಓದಿ

ಭಾರತೀಯ ಪಾಲಕರು ಆನ್ಲೈನ್ ನಲ್ಲಿ ಮಕ್ಕಳ ಫೋಟೋಗಳನ್ನು ಹಾಕಿ ದೊಡ್ಡ ತಪ್ಪು ಮಾಡ್ತಿದ್ದಾರೆ. ಮಕ್ಕಳ ಒಪ್ಪಿಗೆ ಇಲ್ಲದೆ ಫೋಟೋವನ್ನು ಆನ್ಲೈನ್ ಗಳಿಗೆ ಹಾಕುವ ಜೊತೆಗೆ ದುಷ್ಟರ ಕೈಗೆ ಆರಾಮವಾಗಿ ಫೋಟೋಗಳು ಸಿಗಲು ಕಾರಣರಾಗ್ತಿದ್ದಾರೆ. ಜಾಗತಿಕ ಸೈಬರ್ ಭದ್ರತಾ ಕಂಪನಿ ಮ್ಯಾಕಿಫೀಯ ಸಮೀಕ್ಷೆಯಲ್ಲಿ ಈ ವಿಷ್ಯ ಬಹಿರಂಗವಾಗಿದೆ.

ಮಂಗಳವಾರ ಸಮೀಕ್ಷೆ ವರದಿ ಬಿಡುಗಡೆ ಮಾಡಿರುವ ಕಂಪನಿ ಆಘಾತಕಾರಿ ಸಂಗತಿಯನ್ನು ತಿಳಿಸಿದೆ. ಭಾರತದಲ್ಲಿ ಶೇಕಡಾ 40.5 ರಷ್ಟು ಪಾಲಕರು ದಿನಕ್ಕೆ ಒಮ್ಮೆಯಾದ್ರೂ ತಮ್ಮ ಮಕ್ಕಳ ಫೋಟೋ ಅಥವಾ ವಿಡಿಯೋವನ್ನು ಆನ್ಲೈನ್ ಗೆ ಹಾಕ್ತಾರಂತೆ. ಶೇಕಡಾ 36ರಷ್ಟು ಮಂದಿ ವಾರದಲ್ಲಿ ಒಮ್ಮೆ ಮಕ್ಕಳ ಫೋಟೋವನ್ನು ಆನ್ಲೈನ್ ಗೆ ಅಪ್ಲೋಡ್ ಮಾಡ್ತಾರಂತೆ.

ದಿನದಲ್ಲಿ ಒಮ್ಮೆಯಾದ್ರೂ ಮಕ್ಕಳ ಫೋಟೋ ಹಾಕುವವರಲ್ಲಿ ಮುಂಬೈ ನಿವಾಸಿಗಳು ಮೊದಲ ಸ್ಥಾನದಲ್ಲಿದ್ದಾರೆ. ದೆಹಲಿ ನಿವಾಸಿಗಳು ಎರಡನೇ ಸ್ಥಾನದಲ್ಲಿದ್ರೆ ಬೆಂಗಳೂರಿಗರು ಮೂರನೇ ಸ್ಥಾನದಲ್ಲಿದ್ದಾರೆ. ಮಕ್ಕಳ ಫೋಟೋವನ್ನು ಆನ್ಲೈನ್ ಗೆ ಹಾಕುವುದ್ರಿಂದ ಮಕ್ಕಳ ಲೈಂಗಿಕ ಶೋಷಣೆ, ಹಿಂಬಾಲಿಸುವುದು, ಅಪಹರಣ, ಸೈಬರ್ ಬೆದರಿಕೆ  ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತಿವೆಯಂತೆ. ಮಕ್ಕಳ ಫೋಟೋ ಹಾಗೂ ವಿಡಿಯೋ ಹಾಕುವುದ್ರಿಂದ ಅವ್ರ ವೈಯಕ್ತಿಕ ಮಾಹಿತಿಗೆ ಹಾನಿಯಾಗಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...